Skip to main content

ಜಾಗತಿಕ ಯುದ್ಧ#world war# America

 

ಜಾಗತಿಕ ಯುದ್ಧದ ಹೊಸ್ತಿಲಲ್ಲಿ….

                                                    

                                                        ನಂದಕುಮಾರ್ ಕುಂಬ್ರಿ ಉಬ್ಬು

ಜಗತ್ತು ಜಾಗತಿಕ ಯುದ್ಧದ ಹೊಸ್ತಿಲಲ್ಲಿದೆ. ಅಣ್ವಸ್ತ್ರ ಬಳಕೆಗಳ ಅಪಾಯವೂ ತೀವ್ರವಾಗುತ್ತಿದೆ. ರಷ್ಯ ನೇರವಾಗಿಯೇ ವಿಚಾರವನ್ನು ಹಲವಾರು ಸಲ ಹೇಳುತ್ತಾ ಬರುತ್ತಿದೆ. ಈಗ ಮತ್ತೆ ಹೇಳಿದೆ. ತನ್ನ ಅಣ್ವಸ್ತ್ರವುಳ್ಳ ಜಲಾಂತರ್ಗಾಮಿಯನ್ನು ತೈಲ ಹಡಗುಗಳ ರಕ್ಷಣೆಗೆ ನಿಯೋಜಿಸಿದೆ. ವೆನೆಜುವೇಲಾದ ಮೇಲೆ ಅಂತರಾಷ್ಟ್ರೀಯ ಒಪ್ಪಂದಗಳು, ವಿಶ್ವ ಸಂಸ್ಥೆಯ ನಿಯಮಗಳು, ಅಂತರಾಷ್ಟ್ರೀಯ ನಿಯಮಗಳು ...ಎಲ್ಲವನ್ನೂ ಉಲ್ಲಂಘಿಸುತ್ತಾ ದಿಗ್ಬಂದನಗಳು, ಸೇನಾತ್ಮಕ ಸುತ್ತುವರೆಯುವಿಕೆಗಳು, ಬೆದರಿಕೆಗಳನ್ನೆಲ್ಲಾ ಮಾಡುತ್ತಾ ಅತಿಕ್ರಮಣ ಮಾಡಿದ್ದಲ್ಲದೇ ಅಧ್ಯಕ್ಷ ಮದುರೋ ಹಾಗೂ ಅವರ ಬಾಳ ಸಂಗಾತಿಯನ್ನು ಅಪಹರಿಸಿ ತನ್ನ ದೇಶಕ್ಕೆ ಕರೆದುಕೊಂಡು ಹೋಗಿ ನ್ಯಾಯವಿಚಾರಣೆಯ ಹೆಸರಿನಲ್ಲಿ ಬಂಧನದಲ್ಲಿಟ್ಟಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ.

ಈಗ ನಿನ್ನೆ ಅಮೇರಿಕ ರಷ್ಯದ ದ್ವಜವಿದ್ದ ತೈಲ ಹಡಗುಗಳನ್ನು ಅಂತರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದೆ. ಅವುಗಳ ಮೇಲೆ ಬಹಳ ಹಿಂದೆಯೇ ಅಮೇರಿಕ ನಿರ್ಭಂದ ಹೇರಿತ್ತು. ತೈಲ ಟ್ಯಾಂಕರುಗಳುಳ್ಳ ಹಡಗುಗಳು ವೆನೆಜುವೇಲಾಗೆ ಸೇರಿದ್ದು ವೆನೆಜುವೇಲಾ ತನ್ನ ಸುಪರ್ಧಿಯಲ್ಲಿಯೇ ತೈಲ ಮಾರಾಟ ಮಾಡಬೇಕು.... ತನಗೇ ವೆನೆಜುವೇಲಾದ ತೈಲ ಮಾರಬೇಕು..‌. ಇತ್ಯಾದಿ ಸಮರ್ಥನೆಗಳನ್ನು ತನ್ನ ಕೃತ್ಯಗಳಿಗೆ ನೀಡುತ್ತಿದೆ... ಇದನ್ನು ರಷ್ಯ ಹಾಗೂ ಚೀನಾ ತೀವ್ರವಾಗಿ ವಿರೋಧಿಸಿವೆ. ರಷ್ಯಾ ತನ್ನ ನೌಕಾ ಪಡೆಗಳನ್ನು ಅಂತರಾಷ್ಟ್ರೀಯ ಸಮುದ್ರ ವ್ಯಾಪ್ತಿಯಲ್ಲಿ ನಿಯೋಜಿಸುತ್ತಿದೆ. ಚೀನಾ ಕೂಡ ಸೇನಾತ್ಮಕ ಕ್ರಮಗಳಿಗೆ ಮುಂದಾಗುವ ಸೂಚನೆಗಳಿವೆ. ಎಲ್ಲಾ ಬೆಳವಣಿಗೆಗಳಿಗೆ ಟ್ರಂಪ್ ಮಾತ್ರ ಕಾರಣವೆಂಬ ವಿಶ್ಲೇಶಣೆಗಳೇ ಹೆಚ್ಚಾಗಿ ಬರುತ್ತಿವೆ. ರಷ್ಯಾ ಚೀನಾಗಳು ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಅಮೇರಿಕದ ನಡೆಗಳಿಗೆ ಆರ್ಥಿಕವಾಗಿ ಮಾತ್ರವಲ್ಲದೇ ಸೇನಾತ್ಮಕ ತಡೆಗಳನ್ನು ಒಡ್ಡಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿದೆ ಅಮೇರಿಕ ಆಳುವ ವರ್ಗವಾದ ಭಾರಿ ಕಾರ್ಪೋರೇಟುಗಳಿಗೆ ಜಾಗತಿಕ ಲೂಟಿಗೆ ಹಲವಾರು ಅಡೆತಡೆಗಳು ಬಲವಾಗುತ್ತಾ ಹೋಗುತ್ತಿವೆ.

ಅಮೇರಿಕ ಕೂಟದ ಜಾಗತಿಕ ಹಿಡಿತಗಳೂ ದಿನೇ ದಿನೇ ಕ್ಷಯಿಸುತ್ತಾ ಹೋಗುತ್ತಿವೆ. ಡಾಲರಿನ ಹಿಡಿತ ಅಂತರಾಷ್ಟ್ರೀಯ ಆರ್ಥಿಕ ವ್ಯವಹಾರಗಳಲ್ಲಿ ಕುಸಿಯುತ್ತಾ ಚೈನಾದ ಯುವಾನ್, ರಷ್ಯಾದ ರೂಬಲ್, ಜಪಾನಿನ ಯೆನ್, ಯೂರೋಪಿನ ಯೂರೋ ಗಳಂತಹ ಕರೆನ್ಸಿ ವ್ಯವಸ್ಥೆಗಳು ಜಾಗತಿಕ ಮಾರುಕಟ್ಟೆ ಮಾರುಕಟ್ಟೆಯನ್ನು ವ್ಯಾಪಿಸತೊಡಗಿವೆ. ಇಂಡಿಯಾದ ರೂಪಾಯಿ ಕೂಡ ಜಾಗತಿಕ ಕರೆನ್ಸಿಯಾಗಿ ಘೋಷಿತವಾಗಿದೆ. ಇನ್ನೊಂದೆಡೆ ಡಾಲರಿನೆದುರು ಇಂಡಿಯಾದ ರೂಪಾಯಿ ಮೌಲ್ಯ ಹಿಂದೆಂದೂ ಇಲ್ಲದಷ್ಟು ಕುಸಿತ ಕಾಣುತ್ತಾ ಹೋಗುತ್ತಿದೆ. ಇದು ಬೇರೊಂದು ವಿಚಾರ. ಆಪ್ರಿಕಾದ ಬರ್ಕಿನಾ ಫಾಸೋ ದಂತಹ ರಾಷ್ಟ್ರಗಳು ಅಮೇರಿಕ, ಫ್ರಾನ್ಸ್ ಹಿಡಿತಗಳಿಂದ ಹೊರಬಂದು ತಮ್ನದೇ ನಾಣ್ಯ ಹಾಗೂ ಒಕ್ಕೂಟಗಳನ್ನು ಮಾಡಿಕೊಂಡು ತಮ್ಮ ರಾಷ್ಟ್ರಗಳನ್ನು ಎಂ ಎಫ್ ನಂತಹ ಜಾಗತಿಕ ಹಣಕಾಸು ಸಂಸ್ಥೆಗಳ ಸಾಲಗಳ ಹಿಡಿತಗಳಿಂದ ಹೊರಬಂದಿವೆ. ತಮ್ಮ ರಾಷ್ಟ್ರದ ಆಸ್ತಿಗಳನ್ನು ರಾಷ್ಟ್ರೀಕರಿಸಿಕೊಂಡಿವೆ. ಲ್ಯಾಟಿನ್ ಅಮೇರಿಕದ ಹಲವು ರಾಷ್ಟ್ರಗಳು ಅಮೇರಿಕವನ್ನು ಎದುರಿಸಿ ನಿಲ್ಲುತ್ತಿವೆ.

ಇರಾಕ್, ಲಿಬ್ಯ, ಅಫ್ಘಾನಿಸ್ತಾನ್ ಮೊದಲಾದ ರಾಷ್ಟ್ರಗಳ ಮೇಲಿನ ಆಕ್ರಮಣ ಹಾಗೂ ಹಿಡಿದಿಟ್ಟುಕೊಳ್ಳುವಿಕೆಗಳಿಂದ ಅಮೇರಿಕ ನಿರೀಕ್ಷಿಸಿದಷ್ಟು ಆರ್ಥಿಕ ಬೆಳವಣಿಗೆಗಳನ್ನು ತಂದುಕೊಳ್ಳಲಾಗಲಿಲ್ಲ. ಬದಲಿಗೆ ನಷ್ಟಗಳು ಹೆಚ್ಚಾದವು. ಇರಾನ್ ಅಮೇರಿಕದ ಪ್ರಭಾವದಿಂದ ಹೊರಗಿದೆ. ದಕ್ಷಿಣ ಏಷಿಯಾದಲ್ಲಿ ಚೀನದ ಹಿಡಿತವೇ ಪ್ರಧಾನವಾಗುತ್ತಿದೆ. ಅಮೇರಿಕದಲ್ಲಿ ಬಡತನದ ಮಟ್ಟ, ನಿರುದ್ಯೋಗಮಟ್ಟ, ವಸತಿಹೀನತೆ, ತಲಾದಾಯ ಮಟ್ಟ ಭಾರಿ ಹೆಚ್ಚಳದಲ್ಲಿ ಸಾಗುತ್ತಿದೆ. ಅಮೇರಿಕದ ಆರ್ಥಿಕ ಬೆಳವಣಿಗ ಶೇಕ ನ್ನು ಮೀರದೇ ಬಹಳ ವರುಷಗಳಾಗಿವೆ. ಆದರೆ ಅಮೇರಿಕ ಜಿಡಿಪಿ ದರ ಕಳೆದ ವರುಷ 4.3 ಎಂದು ಹೇಳಿಕೊಂಡಿದೆ. ಆದರೆ ಜಿಡಿಪಿ ಬೆಳವಣಿಗೆ ಸರಾಸರಿ ಜನರ ಆದಾಯವನ್ನು ಪ್ರತಿನಿಧಿಸುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಅಮೇರಿಕದ ಕೆಲವೇ ಭಾರಿ ಕಾರ್ಪೋರೇಟುಗಳು ಹೆಚ್ಚು ಹೆಚ್ಚು ಏಕಸ್ವಾಮ್ಯವಾಗುತ್ತಾ ಅಮೇರಿಕ ಆಸ್ತಿ ಹಾಗೂ ಆದಾಯಗಳನ್ನು ನಿಯಂತ್ರಿಸತೊಡಗಿವೆ. ಅದರಲ್ಲಿ ಎಲಾನ್ ಮಸ್ಕ್ ಆರ್ಥಿಕ ಸಾಮ್ರಾಜ್ಯ ಕೂಡ ಒಂದು. ವೆನೆಜುವೇಲಾದ ಮೇಲಿನ ಅತಿಕ್ರಮಣಗಳನ್ನು ಎಲಾನ್ ಮಸ್ಕ್ ಬಹಿರಂಗವಾಗಿಯೇ ಸಮರ್ಥಿಸಿ ತನ್ನ ಸ್ಟಾರ್ ಲಿಂಕ್ಸ್ ಉಪಗ್ರಹ ಆದಾರಿತ ಅಂತರ್ಜಾಲವನ್ನು ವೆನೆಜುವೇಲಾಕ್ಕೆ ವಿಸ್ತರಿಸುವ ಮಾತನಾಡಿರುವುದನ್ನು ನಾವಿಲ್ಲಿ ಗಮನಿಸಬಹುದು. ಅಮೇರಿಕದ ಭಾರಿ ಜಾಗತಿಕ ಕಾರ್ಪೋರೇಟುಗಳು ಚುನಾವಣೆಯನ್ನು ನಿರ್ವಹಿಸಿ ಸ್ವತಹ ಕಾರ್ಪೋರೇಟಾಗಿರುವ ಡೊನಾಲ್ಡ್ ಟ್ರಂಪ್ ರನ್ನು ಅನ್ನು ಮತ್ತೆ ಅಧಿಕಾರಕ್ಕೆ ತಂದಿರುವುದು ಎಂಬುದನ್ನು ನಾವಿಲ್ಲಿ ಗ್ರಹಿಸಬೇಕು. ಟ್ರಂಪ್ ಅಮೇರಿಕದ ಜನಸಾಮಾನ್ಯರನ್ನು ಯಾಮಾರಿಸುವ ಇನ್ನು ಮುಂದೆ ಯುಧ್ದಕ್ಕಿಳಿಯುವುದಿಲ್ಲ.... ಅಮೇರಿಕ ಅಮೇರಿಕದವರಿಗಾಗಿ.... ಅಮೇರಿಕ ಇನ್ನು ಮುಂದೆ ವಿಶ್ವದ ಪೋಲಿಸ್ ಕೆಲಸ ಮಾಡುವುದಿಲ್ಲ ....ಹೀಗೆಲ್ಲಾ ಎರಡಲುಗಿನ ಕತ್ತಿಯ ತರಹದ ಭರವಸೆಗಳನ್ನು ತನ್ನ ಚುನಾವಣಾ ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದರು. ಯುದ್ದ ಹಾಗೂ ಜಾಗತಿಕವಾಗಿ ನೇರ ಹಾಗೂ ಅಪ್ರತ್ಯಕ್ಷ ಸೇನಾತ್ಮಕ ತೊಡಗುವಿಕೆಗಳು ಅಮೇರಿಕದ ಭಾರಿ ಕಾರ್ಪೋರೇಟ್ ಹಿತಾಸಕ್ತಿಗಳಿಗೆ ಅನಿವಾರ್ಯವಾಗಿದೆ. ಎಂಬುದು ಸಾಬೀತಾಗುತ್ತಲೇ ಬರುತ್ತಿದೆ. ಹಾಗಾಗಿ ಅಮೇರಿಕದ ಆಳುವ ವರ್ಗದ ಹಿತಾಸಕ್ತಿ ಮೇಲಾಟಗಳಿಗಾಗಿ ನಡೆಯುತ್ತಿರುವ ಎಲ್ಲಾ ಘರ್ಷಣೆಗಳು ಜಾಗತಿಕ ಯುದ್ಧದತ್ತ ಅಮೇರಿಕವನ್ನು ಎಳೆದುಕೊಂಡು ಹೋಗುತ್ತಿದೆ. ಅವರುಗಳೇ ರೂಪಿಸಿಕೊಂಡಿದ್ದ ಜಾಗತಿಕ ವ್ಯವಸ್ಥೆಯನ್ನು ಅವರುಗಳೇ ಉಲ್ಲಂಘಿಸಬೇಕಾದಂತಹ ಬಿಕ್ಕಟ್ಟು ಅವರದಾಗಿದೆ. ಇವೆಲ್ಲಾ ಅಮೇರಿಕದ ಜನಸಾಮಾನ್ಯರನ್ನೂ ಸೇರಿದಂತೆ ಜಾಗತಿಕ ಜನಸಾಮಾನ್ಯರನ್ನು ತೀವ್ರವಾಗಿ ಬಾಧಿಸುತ್ತದೆ. ಜಗತ್ತನ್ನು ಭಾರಿ ಅಪಾಯಗಳಿಗೆ ದೂಡುತ್ತಿದೆ. ಅಮೇರಿಕ ಆಳುವ ವರ್ಗದ ಎಲ್ಲಾ ದುರಾಕ್ರಮಣಕಾರಿ ನಡೆಗಳನ್ನು ತಡೆಯುವಲ್ಲಿ ಅಮೇರಿಕದ ಜನಸಾಮಾನ್ಯರ ಕರ್ತವ್ಯ ಹೆಚ್ಚಾಗಿದೆ. ಅಮೇರಿಕದ ಆಳುವ ವರ್ಗದ ಇಂತಹ ಜಾಗತಿಕ ವಿರೋಧಿ ನಡೆಗಳ ವಿರುದ್ದ ಜಾಗತಿಕ ಜನಸಾಮಾನ್ಯರು ಒಗ್ಗೂಡಿ ನಿಲ್ಲುವ ಕರ್ತವ್ಯವೂ ಇದೆ. ಇಂಡಿಯಾದ ಜನಸಾಮಾನ್ಯರು ಇಂಡಿಯಾ ಸರ್ಕಾರ ಅಮೇರಿಕದ ಆಳುವ ವರ್ಗದ ನಡೆಗಳನ್ನು ಸ್ಪಷ್ಟವಾಗಿ ಖಂಡಿಸದೇ ಅಮೇರಿಕದ ಪರವಾಗಿ ವರ್ತಿಸುವುದನ್ನು ವಿರೋಧಿಸಬೇಕು. ಹಾಗೆಯೇ ಅಮೇರಿಕದ ಅದ್ಯಕ್ಷ ಡೋನಾಲ್ಡ್ ಟ್ರಂಪ್ ಇಂಡಿಯಾದ ಸರ್ಕಾರವನ್ನು ತನ್ನ ಅಡಿಯಾಳಂತೆ ಪದೇ ಪದೇ ಬಿಂಬಿಸುತ್ತಿರುವುದನ್ನು ಖಂಡಿಸುವಂತೆ ಜನಸಾಮಾನ್ಯರು

ಒಗ್ಗೂಡಿ ಒತ್ತಾಯ ಹೇರಬೇಕು..

                                                                               


೦೮/೦೧/೨೦೨೬.                             

                                           Email: nandakumarnandana67@gmail.com

Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...