ಮೈಸೂರು ಅತ್ಯಾಚಾರ ಘಟನೆ ಗ್ರಹಿಸಬೇಕಾದುದೇನು… -ನಂದಕುಮಾರ್ ಕೆ. ಎನ್. ಕುಂಬ್ರಿಉಬ್ಬು ರಾಜ್ಯದ ಮೈಸೂರಿನಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿ ಆರೇಳು ಮನುಷ್ಯ ರೂಪದ ದುಷ್ಟ ಜಂತುಗಳಿಂದ ಅತ್ಯಾಚಾರವಾಗಿ ನಾಲ್ಕೈದು ದಿನಗಳಾಗಿವೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಭಾರಿ ಆಘಾತಗಳಿಗೆ ಗುರಿಯಾಗಿರುವ ಆ ಸಂತ್ರಸ್ಥ ಹೆಣ್ಣುಮಗಳು ಆಸ್ಪತ್ರೆಯಲ್ಲಿ ನಾಲ್ಕುದಿನಗಳ ಚಿಕಿತ್ಸೆ ಪಡೆದು ಈಗ ವಿಶ್ರಾಂತಿಯಲ್ಲಿದ್ದರೂ ತನ್ನ ಮೇಲಾದ ಹಿಂಸೆ ಹಾಗೂ ತನಗಾದ ತೀವ್ರ ಆಘಾತಗಳಿಂದ ಇನ್ನೂ ಹೊರಬರಲಾಗಿಲ್ಲ. ಆಕೆಯ ಗೆಳೆಯ ಕೂಡ ತೀವ್ರ ಹಲ್ಲೆಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಈ ಘಟನೆ ರಾಜ್ಯದ ಜನರಲ್ಲಿ ಅದರಲ್ಲೂ ಮಹಿಳೆಯರಲ್ಲಿ ತೀವ್ರ ಆತಂಕ ಆಕ್ರೋಷಗಳನ್ನು ಉಂಟುಮಾಡಿವೆ. ಈ ಘಟನೆ ಸಾಕಷ್ಟು ಚರ್ಚೆಗಳಿಗೆ ಗುರಿಯಾಗುತ್ತಿದೆ. ಹಲವಾರು ಕಡೆಗಳಲ್ಲಿ ಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈಗ ತಮಿಳುನಾಡು ಮೂಲದ ಐವರು ಯುವಕರು ಹಾಗೂ ಒಬ್ಬಅಪ್ರಾಪ್ತ ವಯಸ್ಕನನ್ನು ಆರೋಪಿಗಳೆಂದು ಸೆರಹಿಡಿಯಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆಂದ...