Skip to main content

Posts

Showing posts from April, 2021

ಜಾಗತಿಕ ಆರ್ಥಿಕ ಕ್ಷೋಭೆ# ದುರಂತಮಯ ಪರಿಸ್ಥಿತಿಯಲ್ಲಿ ದೇಶ#global economic crisis# disaster

  ಜಾಗತಿಕ ಆರ್ಥಿಕ ಕ್ಷೋಭೆಯ ಮುಂದುವರಿಕೆ.. ದುರಂತಮಯ ಪರಿಸ್ಥಿತಿಯಲ್ಲಿ ದೇಶ… -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು ಅದು 2008ರ ಕಾಲ. ಮಾಹಿತಿ ತಂತ್ರಜ್ಞಾನದ ಮನಮೊಹಕ ಪರದೆಯಾಗಲೇ ಹರಿದಿತ್ತು. ಇದು ಪ್ರಧಾನವಾಗಿ ಅಮೇರಿಕ ಯೂರೋಪುಗಳನ್ನೇ ಆಧರಿಸಿ ಇಂಡಿಯಾದಂತಹ   ದೇಶಗಳಲ್ಲಿ ಭಾರಿ ಭ್ರಾಮಕ ಲೋಕವನ್ನು ಸೃಷ್ಠಿಸಿತ್ತು. ಆದರೆ ಈ ಹೊತ್ತಿಗಾಗಲೇ ಐಟಿ ಎಂಜಿನಿಯರ್ ಗಳಿಗೆ ತಮ್ಮ ಮಕ್ಕಳನ್ನು ಕೊಟ್ಟು ಮದುವೆ ಮಾಡಬೇಕೆಂಬ ಬಹಳಷ್ಟು ಅಕ್ಷರಸ್ಥ ತಂದೆ ತಾಯಂದಿರು ತಮ್ಮ ಈ ನಿಲುವಿನಿಂದ ಹಿಂದೆ ಸರಿದು ಯೋಚಿಸುವಂತಾಗಿ ಬಿಟ್ಟಿತ್ತು. ಇಂಡಿಯಾದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಲಕ್ಷಾಂತರ ಉದ್ಯೋಗಿಗಳು ನಿರುದ್ಯೋಗಿಗಳಾದರು. ಅದರಲ್ಲೂ ಕಾಲ್ ಸೆಂಟರ್ ಉದ್ಯೋಗಿಗಳು ಬೀದಿಪಾಲಾಗಬೇಕಾಯಿತು. ಜೊತೆಗೆ ಇತರ ಹಲವಾರು ಉದ್ಯಮಗಳು ಸಾವಿರ ಲಕ್ಷಗಳ ಸಂಖ್ಯೆಯಲ್ಲಿ ಜಾಗತಿಕಮಟ್ಟದಲ್ಲಿ ನೆಲಕಚ್ಚತೊಡಗಿದ್ದವು.              ಇದೇ ಸಂಧರ್ಭದಲ್ಲೇ ಅಮೇರಿಕದಲ್ಲಿ ಸಾಮಾನ್ಯ ಜನರಿಗೆ ಆರ್ಥಿಕ ಸಂಕಷ್ಟದ ಬಿರುಗಾಳಿ ಬೀಸತೊಡಗಿತು. ಅಮೇರಿಕದ ಆರ್ಥಿಕತೆ ಕುಸಿತದ ನಡುವೆ ಇತ್ತು. ಅಮೇರಿಕದ ಕರಿಯ ಜನಾಂಗವು ಇದರ ಮೊದಲ ಗುರಿಯಾಗಿತ್ತು. ನಂತರವೇ ಇತರ ಜನಸಮುದಾಯಗಳಿಗೆ ಇದರ ಸುಡುತ್ತಿರುವ ಕಾವು ತಟ್ಟಿ ಹೈರಾಣಾಗಿದ್ದರು. ಆದರೆ ಅಮೇರಿಕದ ಒಟ್ಟು ಜನಸಂಖ್ಯೆಯ ಶೇಕಡಾ ಒಂದರ...