ಚಾರಿತ್ರಿಕ ರೈತಾಪಿ ಚಳವಳಿಗೆ ಹತ್ತು ತಿಂಗಳು ಚಾರಿತ್ರಿಕ ರೈತ ಚಳವಳಿ ದೇಶಕ್ಕೆ ಹೇಳುತ್ತಿರುವ ಪಾಠಗಳು - ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು ಮಿಂಚಂಚೆ:-nandakumarnandana67@gmail.com ದೇಶವಷ್ಟೇ ಅಲ್ಲದೇ ಜಾಗತಿಕವಾಗಿಯೇ ಭಾರಿ ಸಂಚಲನವನ್ನು ಸೃಷ್ಟಿಸುತ್ತಿರುವ ಪಂಜಾಬ್, ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ಮದ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಹರಡಿ ಹಾಗೇನೆ ದೇಶಾದ್ಯಂತ ನಡೆಯುತ್ತಿರುವ ರೈತ ಚಳವಳಿಗೆ ಈಗ ಹತ್ತು ತಿಂಗಳು. ಇದು ಸಾಮಾನ್ಯವಾದ ವಿಚಾರವಲ್ಲ. ಆಳುವ ಸರ್ಕಾರದ ಅಂಗಗಳ ಎಡೆಬಿಡದ ಕಿರುಕುಳಗಳು, ಅಡ್ಡಿಗಳು, ಒಡೆದು ಹಾಕುವ ದುಷ್ಟತನಗಳು ಮತ್ತು ದಮನಗಳ ನಡುವೆ ಇಷ್ಟೊಂದು ಸುದೀರ್ಘವಾಗಿ ಮತ್ತು ನಿರಂತರವಾಗಿ ಜನಚಳವಳಿಯೊಂದು ನಡೆಯುತ್ತಾ ಬಂದಿರೋದು ಮಹತ್ವಪೂರ್ಣ ಚಾರಿತ್ರಿಕ ವಿಚಾರವಾಗಿದೆ. ಈ ಚಳವಳಿಯ ನಾಯಕತ್ವ ದೇಶಾದ್ಯಂತ ಸಂಚರಿಸುತ್ತಾ ರೈತಾಪಿಗಳು ಮತ್ತಿತರ ಜನಸಮೂಹಗಳನ್ನು ಸಂಘಟಿಸುತ್ತಾ ಸಾಗುತ್ತಿದೆ. ಕರ್ನಾಟಕಕ್ಕೂ ಬಂದು ರಾಜ್ಯದ ಹಲವಾರು ಕಡೆಗಳಲ್ಲಿ ದೆಹಲಿ...