Skip to main content

ಕೊವಿದ್ 19#ಬಿಕ್ಕಟ್ಟಿನ ಆಯಾಮಗಳು#covid19# crisis#Aspects

ಕೊವಿದ್ ೧೯ ತಂದಿಕ್ಕಿರುವ ಬಿಕ್ಕಟ್ಟಿನ ಆಯಾಮಗಳು!

ಉತ್ತರ ಸಿಗದ ಪ್ರಶ್ನೆಗಳು !


ದೇಶದಲ್ಲಿ ಕೊರೋನಾದ ಮೊದಲ ಪ್ರಕರಣ ಶುರುವಾದ ಮೇಲಿನಿಂದ ಇಲ್ಲಿಯವರೆಗೂ ಸುಮಾರು ಒಂದೂವರೆ ವರುಷಗಳಿಗೂ ಹೆಚ್ಚು ಕಾಲವಾಯಿತು. ಕೋವಿದ್ ೧೯ ರ ಬಗ್ಗೆ ಅದಕ್ಕೂ ಹಲವು ತಿಂಗಳ ಮೊದಲೇ ಚೀನಾ, ಅಮೇರಿಕ ಯೋರೋಪಿನಾದ್ಯಂತ ಮಾಹಿತಿಗಳೂ ತಪ್ಪುಮಾಹಿತಿಗಳೂ ಸಾಕಷ್ಟು ಹರಿದಾಡುವುದು, ಹರಿದಾಡಿಸುವುದೂ ನಡೆದಿದ್ದವು. ಸ್ಯಾನಿಟೈಸರ್, ಮುಖಗವುಸು, ರೆಮ್ಡಿಸೆವಿರ್, ಪ್ಯಾರಾಸೆಟಾಮಾಲ್, ಸ್ಟೀರಾಯ್ಡ್, ಆಂಟಿ ಬಯೋಟಿಕ್ಸ್ ಗಳ ಬಳಕೆ, ಅಪಬಳಕೆಗಳೂ, ಲಾಕ್ ಡೌನ್ ಘೋಷಣೆಗಳೂ ನಡೆದಿದ್ದವು.  ಕೆಲವು ರಾಷ್ಟ್ರಗಳು ಇವೇನೂ ಮಾಡದೇ ಕೊರೋನಾ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ವರದಿಗಳೂ ಇದ್ದವು. ಈಗ ಅಲ್ಲೆಲ್ಲಾ ಲಸಿಕೆ ಮಾತ್ರ ಸಾಕು ಉಳಿದವೇನೂ ಬೇಕಾಗಿಲ್ಲ ಎಂಬ ತೀರ್ಮಾನಗಳು ಹೊರಬೀಳತೊಡಗಿವೆ.



 

ಇಂಡಿಯಾದಲ್ಲಿ ಕೊರೋನಾ ಸಂಧರ್ಭದಲ್ಲಿ ರೈತಾಪಿಗಳ ಹೋರಾಟ ತನ್ನ ವ್ಯಾಪ್ತಿಯನ್ನು ದೇಶದ ರಾಜಧಾನಿ ಹಾಗೂ ಇತರ ಭಾಗಗಳಿಗೆ ಹರಡುವುದು ವೇಗಗೊಂಡಿತು. ಹಾಗೆ ಅದು ಚಾರಿತ್ರಿಕವಾಗಿ ಹೊಸ ಹೋರಾಟ ಮಾದರಿಯಾಗಿ ಸ್ಥಾಪಿತವಾಯಿತು. ಲಕ್ಷಾಂತರ ರೈತರು ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ರಾಜಸ್ತಾನ್, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಹಲವಾರ ರಾಜ್ಯಗಳ ರೈತಾಪಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ದೆಹಲಿ ಗಡಿಗಳಲ್ಲಿ ಜಮಾವಣೆಗೊಂಡು ಪ್ರತಿಭಟನೆಯಲ್ಲಿ ಇಲ್ಲಿಯವರೆಗೂ ಭಾಗವಹಿಸುತ್ತಲೇ ಬಂದಿದ್ದಾರೆ. ಇನ್ನೂರು ದಿನಗಳತ್ತ ರೈತ ಹೋರಾಟ ಸಾಗುತ್ತಿದೆ. ಕಠಿಣ ಚಳಿ ಹಾಗೂ ಭಾರಿ ಬಿಸಿಯ ಕಾರಣದಿಂದಾಗಿ ಸುಮಾರು ಐನೂರಕ್ಕೂ ಹೆಚ್ಚು ರೈತರು ಮರಣ ಹೊಂದಿ ಹುತಾತ್ಮರಾದ ವರದಿಗಳು ಬಂದಿವೆ.

 

ಇತ್ತೀಚೆಗೆ ಆ ಹೋರಾಟದಲ್ಲಿ ಮುಂಚೂಣಿಯಾಗಿ ಪಾತ್ರ ವಹಿಸುತ್ತಾ ಬಂದ ಪ್ರಮುಖರೊಬ್ಬರು ಮಾತನಾಡುತ್ತಾ ಕೊರೋನಾ ಸೋಂಕಿನ ಕಾರಣಕ್ಕೆ ಗಂಭೀರ ಸಮಸ್ಯೆಗಳಿಗೆ ಒಳಗಾಗುವ ಸಂದರ್ಭ ಬಂದರೆ ಇರಲೆಂದು ಕೊರೋನಾ ವಿಶೇಷ ವೈದ್ಯಕೀಯ ವ್ಯವಸ್ಥೆಯನ್ನು ಮಾಡಿಕೊಂಡು ಅದರಲ್ಲಿ ಹದಿನೈದರಷ್ಟು ಹಾಸಿಗೆಗಳು, ವೆಂಟಿಲೇಟರ್, ಆಮ್ಲಜನಕ ವ್ಯವಸ್ಥೆ ಮತ್ತು ಅಗತ್ಯ ವೈದ್ಯರುಗಳು, ದಾದಿಯರನ್ನು ವ್ಯವಸ್ಥೆ ಮಾಡಿದ್ದರು. ಆದರೆ ಇಲ್ಲಿಯವರೆಗೂ ಆ ಹಾಸಿಗೆಗಳಲ್ಲಿ ಮಲಗಬೇಕಾದ ಪರಿಸ್ಥಿತಿ ಯಾವೊಬ್ಬ ಹೋರಾಟಗಾರ ರೈತರಿಗೂ ಬರಲಿಲ್ಲ ಎಂದು ಹೇಳಿದರು. ಬದಲಿಗೆ ಆ ಕೋರೋನಾ ವೈದ್ಯಕೀಯ ಘಟಕ ದೆಹಲಿ ಗಡಿಯ ಸುತ್ತಮುತ್ತಲಿನ ಊರುಗಳ ಜನರಿಗೆ ವೈದ್ಯಕೀಯ ನೆರವು , ಚಿಕಿತ್ಸೆ ನೀಡುತ್ತಿದೆ ಎಂದರು.



 

ಬೆಂಗಳೂರಿನಲ್ಲಿ ರಾಜು ಎನ್ನುವ ವೈದ್ಯರೊಬ್ಬರು ತಮ್ಮ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಯಶಸ್ವಿ ಚಿಕಿತ್ಸೆ ನೀಡುತ್ತಾ ಬಂದಿದ್ದು, ಅಲ್ಲಿ ಚಿಕಿತ್ಸೆ ಪಡೆದವರು ಕೊರೋನಾ ಸಮಸ್ಯೆಯಿಂದ ಬಹುತೇಕ ಸಹಜ ರೀತಿಯಲ್ಲಿ ಪಾರಾಗಿದ್ದಾರೆ. ಅಲ್ಲಿ ಯಾವುದೇ ಮುಖಗವುಸಾಗಲೀ, ಪಿಪಿಇ ಕಿಟ್ ಆಗಲೀ ಮೊದಲಿನಿಂದಲೂ ಅಲ್ಲಿನ ವೈದ್ಯರಾಗಲೀ, ದಾದಿಯರಾಗಲೀ ಉಪಯೋಗಿಸಿರಲೇ ಇಲ್ಲ. ಅವರೆಲ್ಲರಿಗೂ ಕೊರೋನಾ ಸೋಂಕಾಗಿ ಸಹಜವಾಗಿ ಗುಣಮುಖರಾದರೆಂದು ಡಾ. ರಾಜು ಹಾಗೂ ಅಲ್ಲಿನ ಇತರ ವೈದ್ಯರುಗಳು ದೃಢವಾಗಿ ಹೇಳಿದ ಸುದ್ಧಿವಾಹಿನಿಯೊಂದರ ವೀಡಿಯೋ ಹರಿದಾಡಿತ್ತು. ವೀಡಿಯೋ ಹರಡಿ ವ್ಯಾಪಕವಾದ ನಂತರ ರಾಜುರ ಆಸ್ಪತ್ರೆಯನ್ನು ನಿಯಮ ಉಲ್ಲಂಘನೆ ಇತ್ಯಾದಿ ನೆಪದಲ್ಲಿ ಮುಚ್ಚಿಸುವುದಕ್ಕೆ ಸರ್ಕಾರ ಮತ್ತದರ ಅಂಗಸಂಸ್ಥೆಗಳು ಅತ್ಯುತ್ಸಾಹ ತೋರಿದ್ದು ನಂತರ ಸ್ಥಳೀಯ ಜನರ ಪ್ರತಿಭಟನೆಯಿಂದ ಪುನರಾರಂಭಗೊಂಡ ವರದಿಯೂ ಬಂದಿತ್ತು.

 

ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ಕೊರೋನಾದ ಬಗ್ಗೆ ಮೊದಲಿನಿಂದಲೂ ಅದೊಂದು ಸಾಧಾರಣ ವೈರಸ್ ಅಷ್ಟೇ, ಬಹಳ ಹಿಂದಿನಿಂದಲೂ ನಮ್ಮ ನಡುವೆಯೇ ಇದ್ದಂತಹ ಸಾರ್ಸ್ ವೈರಸ್ ನ ಪ್ರಭೇದವಷ್ಟೇ, ಅದೇನೂ ಮಾರಣಾಂತಿವಲ್ಲ, ದೇಹದಲ್ಲಿ ಪ್ರತಿಕಾಯಗಳು ಬೆಳೆಯಲು ಅವಕಾಶ ಮಾಡಿಕೊಟ್ಟರೆ ಶರೀರವೇ ಅದರ ಸಮಸ್ಯೆಯನ್ನು ಪರಿಹರಿಸುತ್ತದೆ. ಅದು ಎಲ್ಲರಲ್ಲೂ ಸಹಜವಾಗಿ ಹರಡುತ್ತದೆ. ಯಾರಿಗೆ ಗಂಭೀರ ಸಮಸ್ಯೆಯೆನಿಸುತ್ತದೆಯೋ ಅವರು ಹಾಗೂ ಯಾರಿಗೆ ಇತರ ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೋ ಅವರಿಗೇನಾದರೂ ಗಂಭೀರ ಸಮಸ್ಯೆ ಕಂಡುಬಂದಲ್ಲಿ ಅಂತಹವರು ಮಾತ್ರ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಅಗತ್ಯ. ಉಳಿದಂತೆ ಸೂಕ್ತ ಆಹಾರ, ಸಕ್ಕರೆಯುಕ್ತ ಆಹಾರದ ಕಡಿತ, ಅಗತ್ಯ ವ್ಯಾಯಾಮ, ಆರೋಗ್ಯಕರ ಅಂತರಗಳನ್ನು ಪಾಲಿಸುತ್ತಾ, ಹರಡುವಿಕೆಯನ್ನು ಒಮ್ಮೆಗೆ ಆಗದಂತೆ ನೋಡಿಕೊಳ್ಳುವ ಕ್ರಮಗಳನ್ನು ಮಾಡಿದರೆ ಸಾಕು..ಗಾಬರಿಯಾಗುವ ಅಗತ್ಯವೇ ಇಲ್ಲ. ಮೊದಲನೇಯ ಎರಡನೆಯ ಮೂರನೆಯ ಅಲೆ ಇತ್ಯಾದಿ ಏನೂ ಅಲ್ಲ. ಅದು ಯಾರಿಗೆ ಸೋಂಕಿಲ್ಲವೋ ಅವರನ್ನೆಲ್ಲಾ ಸೋಂಕಿಸುತ್ತಾ ಹೋಗುತ್ತದೆ. ಅದು ಯಾವುದೇ ವೈರಸ್ಸಿನ ಸಹಜ ಲಕ್ಷಣ...ಅವೈಜ್ಞಾನಿಕ ವೈದ್ಯಕೀಯ ಚಿಕಿತ್ಸೆ ಮಾಡುವುದು ಅಪಾಯಕಾರಿ. ಅವೈಜ್ಞಾನಿಕ ಲಾಕ್ ಡೌನ್ ಅವಶ್ಯಕತೆಯಿಲ್ಲ. ಶಾಲಾಕಾಲೇಜುಗಳನ್ನು ಮುಚ್ಚಿ ದೇಶದ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯವನ್ನು ನಾಶಮಾಡುವ ಕ್ರಮಗಳು ಸರಿಯಲ್ಲ.......ಎಂದೆಲ್ಲಾ ಹೇಳುತ್ತಲೇ, ಸಾರ್ವಜನಿಕ ಜಾಗೃತಿ ಮೂಡಿಸುತ್ತಲೇ ಬಂದಿದ್ದರು. ಅವರ ಮೇಲೆಯೂ ಸಕಾರಣವೇ ಇಲ್ಲದೇ ಪ್ರಕರಣವೊಂದನ್ನು ದಾಖಲಿಸಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆದಿದ್ದೂ ಭಾರಿ ಸುದ್ಧಿ ಮಾಡಿತು

 

ಇದೀಗ ಜಾಗತಿಕವಾಗಿ ಹಾಗೂ ದೇಶದಲ್ಲೂ ಕಕ್ಕಿಲ್ಲಾಯ, ರಾಜುರಂತಹ ವೈದ್ಯರುಗಳು ಹೇಳುತ್ತಾ ಬಂದಿರುವ ಹಲವು ವಿಚಾರಗಳು ಸರಿಯೆಂದು ಸರ್ಕಾರಗಳೇ ಒಪ್ಪಬೇಕಾದಂತಹ ಪರಿಸ್ಥಿತಿ ಬಂದಿದೆ. ಅವುಗಳನ್ನೇ ನೀತಿಗಳಾಗಿ ಹೊರಬರತೊಡಗಿವೆ. ಈ ಎಲ್ಲಾ ವಿದ್ಯಮಾನಗಳು ಒಂದಷ್ಟು ಗಮನ ಸೆಳೆದರೂ ಅಗತ್ಯ ಚರ್ಚೆಗಳಿಗೆ ದಾರಿ ಮಾಡಿಲ್ಲ. ಅದಾಗದಂತೆ ತಡೆಯುವ ವ್ಯವಸ್ಥಿತ ಹುನ್ನಾರಗಳೂ ನಿಚ್ಚಳವಾಗಿ ಕಾಣುತ್ತಿವೆ.



 

ಇದೇ ಸಂಧರ್ಭದಲ್ಲಿ ಕೋವೀಶೀಲ್ಡ್, ಕೋವಾಕ್ಸಿನ್ ಗಳಂತಹ ಚುಚ್ಚುಮದ್ದುಗಳನ್ನು ಕಡ್ಡಾಯ ಮಾಡುವ, ಖಾಸಗೀ ವೈದ್ಯಕೀಯ ವ್ಯವಸ್ಥೆಯಲ್ಲಿ ಸಾವಿರಾರು ರೂಪಾಯಿ ಕೊಟ್ಟು ಖರೀದಿಸುವ, ಸರಕಾರೀ ಖರ್ಚಿನಲ್ಲಿ ಹಂಚುವ ಕಾರ್ಯಗಳೂ ನಡೆಯುತ್ತಿವೆ. ಈ ಲಸಿಕೆಗಳ ಎರಡೂ ಡೋಸುಗಳ ಲಸಿಕೆ ಪಡೆದವರೂ ಕೊರೋನಾ ಸೋಂಕಿತರಾಗುತ್ತಿರುವುದರ ವರದಿಗಳೂ ಬರುತ್ತಿವೆ. ಜೊತೆಗೆ ಲಕ್ಷಾಂತರ ಮರಣಗಳು ಕೋರೋನಾ ಸೋಂಕಿನ ಕಾರಣವೆಂದು ದಾಖಲಾಗುತ್ತಿವೆ. ವಾಸ್ತವವೇನೆಂದರೆ ಕೊರೋನಾ ಬಗ್ಗೆ ಬಹುತೇಕ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿತ ಮುದ್ರೆ ನೀಡಿರುವುದು ತುರ್ತು ಸಂಧರ್ಭಗಳಲ್ಲಿ ಬಳಸಬಹುದು ಎಂದು ಮಾತ್ರ. ತುರ್ತು ಸಂದರ್ಭಗಳಲ್ಲಿ ಬಳಸಬಹುದು ಎಂದಿರುವ ಲಸಿಕೆಗಳನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರೆಲ್ಲರಿಗೂ ಹಾಕಿಸುವ ಕಾರ್ಯ ಸಾಧುವೇ ಎಂಬುದನ್ನು ಕೂಡ ನೋಡಬೇಕಲ್ಲವೇ..

 

ಅದೇ ವೇಳೆಯಲ್ಲಿ ಕೋವಾಕ್ಸಿನ್ ಆಗಲೀ ಕೋವೀಶೀಲ್ಡ್ ಆಗಲೀ ಕೋವಿದ್ ೧೯ ಕ್ಕೆ ಪರಿಣಾಮಕಾರಿ ಲಸಿಕೆ ಎಂಬುದು ರುಜುವಾತು ಆಗದಿರುವ ವರದಿಗಳೂ ಬಂದು ಅಮೇರಿಕ ಯೂರೋಪು ಅವುಗಳನ್ನು ಬಳಸಲು ತಿರಸ್ಕರಿಸಿರುವ ವರದಿಗಳೂ ಇವೆ. ಅಷ್ಟೇ ಅಲ್ಲ ಕೋವಿದ್ ಚುಚ್ಚುಮದ್ದಿನ ಒಂದು ಪ್ರಮುಖ ಅಂತರಾಷ್ಟ್ರೀಯ ಸಂಸ್ಥೆ ಅಸ್ಟ್ರಜೆನೆಕಾದ ಚುಚ್ಚುಮದ್ದು ಕೂಡ ಉಪಯೋಗ ಯೋಗ್ಯವಲ್ಲ ಎಂದು ಆ ರಾಷ್ಟ್ರಗಳು ತಿರಸ್ಕರಿಸಿರುವುದು, ಅಸ್ಟ್ರಾ ಜೆನೆಕಾ ಕೂಡ ಅದನ್ನು ಒಪ್ಪಿಕೊಂಡಿರುವುದೂ ವರದಿಯಾಗಿದೆ.

 

ದೇಶದ ಮಧ್ಯಮವರ್ಗ ತನ್ನ ಜೀವಮಾನದ ಉಳಿತಾಯಗಳನ್ನು ಸರಕಾರದ ಹಲವಾರು ನಡೆಗಳಿಂದ ನಿರಂತರವಾಗಿ ಕಳೆದುಕೊಳ್ಳುತ್ತಲೇ ಬರುತ್ತಿದೆ. ಹಲವಾರು ಜನರು ದಿವಾಳಿಯೆದ್ದುಹೋಗಿದ್ದಾರೆ. ಕೋವಿದ್ ಬಗ್ಗೆ ಅತೀ ಹೆಚ್ಚು ಭಯಾಂದೋಲನಕ್ಕೆ ಗುರಿಯಾಗಿರುವವರೂ ಇದೇ ವರ್ಗವಾಗಿದ್ದಾರೆ.

ಅದೇ ವೇಳೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸೆರೆಮ್ ಇನ್ಸ್ಟಿ ಟ್ಯೂಟ್ ನ ಅದರ್ ಪೂನಾವಾಲ, ಅಂಬಾನಿ, ಅದಾನಿ ನಮ್ಮದೇಶದಲ್ಲಿ ನೂರಾರು ಪಟ್ಟು ತಮ್ಮಸಂಪತ್ತನ್ನುಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಜಾಗತಿಕವಾಗಿ ಕೂಡ ಕೆಲವೇ ಜಾಗತಿಕ ಕಾರ್ಪೋರೇಟುಗಳು ನೂರಾರು ಪಟ್ಟು ಸಂಪತ್ತು ಶೇಖರಿಸಲು ಕೋವಿದ್ ಬಿಕ್ಕಟ್ಟು ಕಾಲದಲ್ಲೇ ಸಾಧ್ಯವಾಗಿದೆ. ಅದರಲ್ಲಿ ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ ನಂತಹವರೂ ಇದ್ದಾರೆ.

ಇದೀಗ ಬ್ಯಾಂಕುಗಳು ಕೊರೋನಾ ಚಿಕಿತ್ಸೆಗೆ ಸಾಲಗಳನ್ನು ಕೊಡುವ ಯೋಜನೆಗಳ ಪ್ರಚಾರ ಆರಂಭಿಸಿವೆ. ಆ ರೀತಿ ಪಡೆದ ಸಾಲ ಖಾಸಗೀ ವೈದ್ಯಕೀಯ ಲಾಭಿಯ ತಿಜೋರಿಗೆ ನೇರವಾಗಿ ಸೇರುತ್ತದೆ ಎನ್ನುವುದನ್ನು ಹೇಳಬೇಕಾಗಿಲ್ಲ ತಾನೇ. ಅಂತಹ ಸಾಲ ಕೂಡ ಸಂಬಳ ಖಾತ್ರಿ ಇರುವ, ಸ್ಥಿರ ವರಮಾನ ಇರುವವರಿಗೆ ಮಾತ್ರವೇ ದೊರೆಯುವುದು ಎನ್ನುವುದು ಗುಟ್ಟೇನೂ ಅಲ್ಲ ತಾನೇ. ಈಗ ಕೋವಿದ್ ಮೂರನೇ ಅಲೆಯ, ಅದರಿಂದ ಮಕ್ಕಳುಗಳು ದೊಡ್ಡ ಪ್ರಮಾಣದಲ್ಲಿ ಬಲಿಯಾಗುತ್ತಾರೆಂಬ ಭಯಾಂದೋಲನ ಹರಡುವ ಕಾರ್ಯ ಆರಂಭವಾಗಿದೆ. ಆದರೆ ಮಕ್ಕಳಲ್ಲಿ ಇದರ ಪರಿಣಾಮ ಬಹಳ ಕಡಿಮೆ ಎಂಬ ವರದಿಗಳು ಬಹಳ ಹಿಂದಿನಿಂದಲೂ ಹಲವು ವೈದ್ಯರು ಹೇಳುತ್ತಾ ಬಂದಿದ್ದಾರೆ. ಈಗಾಗಲೇ ಸಾಕಷ್ಟು ಮಕ್ಕಳಿಗೆ ಕೊರೋನಾ ಬಂದು ಹೋಗಿದೆ. ಅವೈಜ್ಞಾನಿಕ ಚಿಕಿತ್ಸಾ ಕ್ರಮಗಳನ್ನು ಅನುಸರಿಸದೇ ಇದ್ದುದರಿಂದ ಕೆಲವು ಸಮಸ್ಯೆಗಳಾಗಿವೆಯೇ ಹೊರತು ಮಕ್ಕಳು ಮರಣ ಹೊಂದಿರುವ ವರದಿಗಳು ವಿರಳವೇ ಆಗಿದೆ.



 

ಇವೆಲ್ಲವುಗಳನ್ನೂ ಅವಲೋಕಿಸಿದಾಗ ಕೊವಿದ್ ೧೯ರ ವಿಚಾರದ ಹಿಂದೆ ಆರೋಗ್ಯ ಸಮಸ್ಯೆ ಅಲ್ಲದ ಮತ್ತೇನೇನೋ ಕೆಲಸ ಮಾಡುತ್ತಿವೆಯೇನೋ ಎಂಬ ಅನುಮಾನಗಳು ಸಹಜವಾಗಿ ಬರಲೇ ಬೇಕು ತಾನೇ. ಕೊರೊನಾವನ್ನು ನಿಭಾಯಿಸಿರುವ ರೀತಿಗಳಲ್ಲಿ ಯಾವ್ಯಾವುದೋ ಹಿತಾಸಕ್ತಿಗಳೇ ಪ್ರಧಾನವಾಗಿ ಕೆಲಸ ಮಾಡುತ್ತಿರುವುದರ ಸೂಚನೆಗಳೂ ಮೇಲ್ಮಟ್ಟದಲ್ಲೇ ಗೊತ್ತಾಗುವಂತಿವೆಯಲ್ಲವೇ?

 

ಸರಕಾರಗಳೂ ಮಾಧ್ಯಮಗಳೂ, ಖಾಸಗೀ ವೈದ್ಯಕೀಯ ಲಾಭಿಗಳು ಬಿಂಬಿಸುತ್ತಾ ಬೆದರಿಸುತ್ತಾ ಬಂದಂತೆ ಕೋವಿದ್ ೧೯ ಇಲ್ಲ ಎನ್ನುವುದೂ ಕೂಡ ಈಗಾಗಲೇ ಹಲವರು ಗ್ರಹಿಸಿರಬಹುದು ತಾನೇ.

 

ಆದರೆ ಕೊರೋನಾ ಹೆಸರಲ್ಲಿ ಮಾಡುತ್ತಿರುವ ಅವಾಂತರಗಳು ಅದರಿಂದ ಆಗುತ್ತಿರುವ ದುರಂತಗಳು, ಆರ್ಥಿಕ ಹಾನಿಗಳು,  ಭೂಮಿ, ಯಂತ್ರ, ಸೇರಿದಂತೆ ಉತ್ಪಾದನಾ ಸಾಧನಗಳ ವಿನಾಶಗಳು, ಶೈಕ್ಷಣಿಕ ಹಾನಿ, ಸಾಮಾಜಿಕ ಹಾನಿ, ಮನೋವೈಜ್ಞಾನಿಕ ಹಾನಿಗಳು, ಮಾನವ ಸಂಬಂಧಗಳಲ್ಲಿ ಆಗಿರುವ ಆಘಾತಕಾರಿ ಹಾನಿಗಳು, ಸಾಮಾಜಿಕ ಭದ್ರತೆಗೆ ಒದಗಿರುವ ಅಪಾಯಗಳ ಬಗ್ಗೆ ಅಗತ್ಯಕ್ಕೆ ತಕ್ಕಷ್ಟು ಚರ್ಚೆಗಳು ನಡೆಯುತ್ತಿಲ್ಲ.

ಮುಂದಿನ ದಿನಗಳಲ್ಲಿ ಕೊಲೆ ಸುಲಿಗೆ, ಕಳ್ಳತನ, ದರೋಡೆಗಳು ತೀವ್ರ ಮಟ್ಟದಲ್ಲಿ ಹೆಚ್ಚಾಗುವ ಸೂಚನೆಗಳು ಈಗಾಗಲೇ ಬರತೊಡಗಿವೆ. ಆತ್ಮಹತ್ಯೆಗಳ ಪ್ರಕರಣಗಳು ಎಲ್ಲಡೆಯೂ ಮತ್ತೂ ತೀವ್ರವಾಗತೊಡಗಿವೆ. ಮಾನಸಿಕ ವ್ಯಸನಿಗರ ಸಂಖ್ಯೆ ಊಹಿಸಲಾಗದಷ್ಟು ಮಟ್ಟದಲ್ಲಿ ಏರತೊಡಗಿವೆ. 

ಈ ಎಲ್ಲಾ ರೀತಿಯ  ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕ, ಮಾನವಿಕ ದುರವಸ್ಥೆಗಳ ಕುರಿತು ಜನಸಾಮಾನ್ಯರು ಗಮನ ಹರಿಸದಂತೆ, ಅವುಗಳ ಬಗ್ಗೆ ಚರ್ಚೆಗಳು, ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳುವ, ಬೇರೆ ಕಡೆ ಸಾರ್ವಜನಿಕರ ಗಮನ ಸೆಳೆಯುವ ಕೆಲಸಗಳೂ ಬಿರುಸಿನಿಂದಲೇ ನಡೆಯುತ್ತಿವೆ. ಆ ನಿಟ್ಟಿನಲ್ಲಿ ಈಗಾಗಲೇ ಹಳತಾಗಿರುವ ಇಲ್ಲವೇ ಸದ್ಯಕ್ಕೆ ಪ್ರಸ್ತುತವಲ್ಲದ ವಿಚಾರಗಳನ್ನು ಯಾವುದಾದರೂ ನೆಪಗಳಲ್ಲಿ ಹೊರತೆಗೆದು ಸಾರ್ವಜನಿಕರ ಗಮನ ಬೇರೆಡೆ ಸೆಳೆಯುತ್ತಾ ಅವರನ್ನೆಲ್ಲಾ ಒಳಗೊಳಿಸುವ ಪ್ರಕ್ರಿಯೆಗಳು ಬಿರುಸು ಪಡೆಯುತ್ತಿವೆ. ಅದಕ್ಕಾಗಿಯೇ ವೆಬಿನಾರುಗಳ ಸಂಖ್ಯೆಗಳು ಹೆಚ್ಚತೊಡಗಿವೆ. ಹಲವಾರು ಪ್ರಗತಿಪರರು ಉದಾರವಾದಿಗಳು, ಚಿಂತಕರು ಕೂಡ ಇದನ್ನು ಮನಗಾಣದೇ ಇಂತಹ ಚರ್ಚೆಗಳ ಜೊತೆಯಲ್ಲಿ ತೇಲುವಂತೆ ಆಗುತ್ತಿದೆ.

 ಆದರೆ ಕೋವಿದ್ ಬಿಕ್ಕಟ್ಟು ತಂದ ಪರಿಸ್ಥಿತಿಗಳ ಕುರಿತಾದ ಚರ್ಚೆಗಳು ವೆಬಿನಾರುಗಳು ಅಗತ್ಯದ ಮಟ್ಟದಲ್ಲಿ ನಡೆಯುತ್ತಿಲ್ಲ. ಒಂದಷ್ಟು ನಡೆದರೂ ಅವು ಕೇವಲ ವೈದ್ಯಕೀಯ ದೃಷ್ಟಿಕೋನ ಮಾತ್ರ ಹೊಂದಿದವುಗಳಾಗಿವೆ. ಇನ್ನುಳಿದವು ಬಹುತೇಕ ಪರಿಹಾರ, ಲಸಿಕೆ, ಆಹಾರದ ಕಿಟ್, ಊಟ ವ್ಯವಸ್ಥೆ ಇತ್ಯಾದಿಗಳಿಗೆ ಸೀಮಿತವಾಗಿವೆ. ಇತರ ಹಲವಾರು ಗಂಭೀರ ಆಯಾಮಗಳ ಕಡೆ ಹೊರಳುತ್ತಿಲ್ಲ.

ಈ ಎಲ್ಲಾ ಕುತಂತ್ರಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಈಗಲಾದರೂ ಗಮನ ಕೇಂದ್ರೀಕರಿಸಿ ವಿಷಯ ಪಲ್ಲಟವಾಗದಂತೆ ಚರ್ಚೆಗಳು, ಪ್ರತಿಭಟನೆಗಳು ನಡೆಯಬೇಕಲ್ಲವೇ....ಅದು ರಾಜ್ಯದ ದೇಶದ ಹಾಗೂ ಜನಸಾಮಾನ್ಯರ ಹಿತದೃಷ್ಠಿಯಿಂದ ಅತ್ಯಗತ್ಯ ತಾನೇ..

 

೨೨/೦೬/೨೦೨೧.                                 - ನಂದಕುಮಾರ್ ಕೆ.ಎನ್. ಕುಂಬ್ರಿಉಬ್ಬು

 


ಮಿಂಚಂಚೆ: nandakumarnandana67@gmail.com

 

 


Comments

Popular posts from this blog

ಒಂದು ಹಳ್ಳಿಯ ಕತೆ#village#story#shimoga#karnataka

  ಒಂದು ಹಳ್ಳಿಯ ಕತೆ                                                                  -ನಂದಕುಮಾರ್‌ ಕುಂಬ್ರಿ ಉಬ್ಬು    nandakumarnandana67@gmail.com                       ಅದೊಂದು ಹಳ್ಳಿ, ಸುಮಾರು ಇಪ್ಪತ್ತೈದರಷ್ಟು ಕುಟುಂಬಗಳು ಅಲ್ಲಿ ವಾಸ ಮಾಡುತ್ತಿವೆ. ಕೆಲವು ಕುಟುಂಬಗಳು ಮುಳುಗಡೆ ಸಂತ್ರಸ್ತರಾಗಿದ್ದಾರೆ. ಆ ಹಳ್ಳಿಗೆ ನೂರಾರು ವರುಷಗಳ ಇತಿಹಾಸವಿದೆ. ಅಲ್ಲಿನವರ ಪ್ರಕಾರ ಆ ಹಳ್ಳಿಯ ಅದೀಕೃತ ಭೂದಾಖಲೆಯೇ ನೂರಮೂವತ್ತು ವರುಷಗಳ ಇತಿಹಾಸವನ್ನು ದಾಖಲು ಮಾಡುತ್ತದೆ. ಅಂದರೆ ಬ್ರಿಟೀಷರ ಆಡಳಿತಕ್ಕೂ ಮೊದಲಿನ ಕಾಲದಿಂದಲೂ ಈ ಹಳ್ಳಿಗೆ ಇತಿಹಾಸವಿರಬಹುದು. ಬ್ರಿಟೀಷರು ಹೋಗಿ ಈಗಾಗಲೇ ಎಪ್ಪತ್ತೈದು ವರುಷಗಳಾಗಿವೆಯಲ್ಲ. ಮಲೆನಾಡಿನ ಹಳ್ಳಿಯಾದ್ದರಿಂದ ವಿರಳ ಮನೆಗಳು, ಕಿ. ಮೀಗಳ ಅಂತರದ ಮನೆಗಳು ಸಹಜ ತಾನೇ. ಮೊದಲದು ಜೈನ ಸಮುದಾಯದವರ ಹಿಡಿತದಲ್ಲಿದ್ದ ಹಳ್ಳಿಯಾಗಿತ್ತು. ಅವರೇ ಅಲ್ಲಿನ ಭೂಮಾಲಿಕರಾಗಿದ್ದವರು. ಈ ಹಳ್ಳಿ ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗಡಿಬಾಗದಲ್ಲಿದೆ...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...

ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ# Ragi thene# tribal woman's life story#kannada

  ʼರಾಗಿ ತೆನೆʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ ಒಂದು ಗಾಢ ಜೀವಿತಾನುಭವ ಕಥನ     “ಬಾಲ್ಯದಲ್ಲಿ ಕುರಿ ಮೇಯಿಸುವುದು, ದನ ಮೇಯಿಸುವುದು, ಸೌದೆ ತರುವುದು,ಕೂಲಿ ಕೆಲಸಕ್ಕೆ ಹೋಗುವುದು,ಸೇದುವ ಬಾವಿಯಿಂದ ನೀರು ಸೇದುವುದು. ಇವೇ ಮುಂತಾದ ಪಶುಪಾಲನೆಯ ಕಾಯಕ ಮಾಡುತ್ತಾ, ಕಾಡು ಮೇಡು ಅಲೆಯುತ್ತಾ, ಕಾರೆಕಾಯಿ, ಬಾರೆಕಾಯಿ, ಕೈಯಾರಿ ಕಾಡುಗೆಣಸು, ಬೆಲ್ಲದವರೆ ಸೊಪ್ಪು ಮುಂತಾದ ಕಂದಮೂಲಗಳನ್ನು ತಿಂದು ಹಳ್ಳದ ನೀರು ಕುಡಿಯುತ್ತಾ ಕಾಡುಹುಡುಗಿಯಾಗಿ ಬಾಲ್ಯವನ್ನು ದಾಟಿದಳಂತೆ, ಅವಳೇ ಹೇಳುತ್ತಿದ್ದ ಹಾಗೆ ಇಷ್ಟು ಕೆಲಸಕ್ಕೆ ವರುಷಕ್ಕೆ ಎರಡು ಲಂಗಗಳಷ್ಟೇ ಅವಳ ಪಾಲಿಗೆ ಸಂದಾಯವಾಗುತ್ತಿದ್ದ ಅಮೂಲ್ಯ ಕೊಡುಗೆಗಳು. ಅವಳ ಹುಟ್ಟಿನಿಂದ ನನ್ನ ಹುಟ್ಟಿನವರೆಗೂ ಮೆಟ್ಟಿನ ಸಂಗವಿರಲಿಲ್ಲ…. ಅಜ್ಜಿ ಮೃತಳಾದ ಸ್ವಲ್ಪ ದಿನಗಳಲ್ಲಿಯೇ ಮಕ್ಕಳಿಗೆ ಬೇಯಿಸಿ ಹಾಕುವವರಿಲ್ಲ ಎಂಬ ನೆಪ ಮುಂದೊಡ್ಡಿ ನಮ್ಮಜ್ಜ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡು ಬಂದನಂತೆ ಅಷ್ಟರಲ್ಲಿಯೇ ನಮ್ಮ ಪಿತಾಮಹ ಅವನ ಪಿತಾಮಹನ ಚಿತಾವಣೆಯಿಂದ ಬಕ್ಕನ ಹೊಲದಲ್ಲಿ ಬಹಿರ್ದೆಸೆಗೆಂದು ಹೋಗುತ್ತಿದ್ದ ಅವ್ವನನ್ನು ತಡೆದು ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದು ಮೂರು ಬಾರಿ ಕೂಗಿ ಕೈಹಿಡಿದನಂತೆ. ಹಟ್ಟಿಯಿಂದ ಹೊರಗೆ ಒಂಟಿಯಾಗಿ ಬರುವ ಬರುವ ಮೈನೆರೆದ ಹೆಣ್ಣು ಮಕ್ಕಳನ್ನು ಯಾವುದೇ ಗಂಡಸು ಮೂರುಬಾರಿ ʼಮುಟ್ಟಿಕೊಂಡೆ ಮುಟ್ಟಿಕೊಂಡೆʼ ಎಂದರೆ ಮುಗಿಯಿತು. ಮುಟ್ಟಿಕೊಂಡವರಿಗೂ ಮುಟ್ಟಿಸಿ...