Skip to main content

Posts

Showing posts from April, 2020

ತೀವ್ರ ಆರ್ಥಿಕ ಹಾಗೂ ರಾಜಕೀಯ #ಕೊರೋನಾ 19 ಸುತ್ತಮುತ್ತ# economic n political#corona crisis# around # global

ತೀವ್ರ ಆರ್ಥಿಕ ಹಾಗೂ ರಾಜಕೀಯ ಸಂಕ್ಷೋಭೆಯತ್ತ ವಿಶ್ವ  ಕೊರೋನಾ 19 ಸುತ್ತಮುತ್ತ ಜರುಗುತ್ತಿರುವುದೇನು.. ಜಾಗತಿಕವಾಗಿ ಈಗಾಗಲೇ ಮೂರು ದಶಲಕ್ಷದಷ್ಟು ಜನರಿಗೆ ಕೊವಿದ್ 19 ವೈರಸ್ ಭಾಧಿಸಿದೆ ಎಂಬ ಒಂದು ಅಂದಾಜಿದೆ. ಅದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಮರಣವನ್ನಪ್ಪಿದ್ದಾರೆ ಎನ್ನಲಾಗಿದೆ. ಮರಣದ ಪ್ರಮಾಣ ಮುಂದುವರೆದವುಗಳೆಂದು ಗುರ್ತಿಸಿಕೊಂಡ ರಾಷ್ಟ್ರಗಳಲ್ಲಿ ಅತೀ ಹೆಚ್ಚಿನದಾಗಿದೆ. ಅದರಲ್ಲಿ ಇಟಲಿ, ಸ್ಪೈನ್ , ಅಮೇರಿಕ, ಯು.ಕೆ, ಜರ್ಮನಿ, ಚೀನಾಗಳು ಪ್ರಧಾನವಾಗಿವೆ. ಚೀನ ಕೊರೋನಾದಿಂದಾಗಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಜನರನ್ನು ಕಳೆದುಕೊಂಡು ಹರಡುವಿಕೆಯ ಮೇಲೆ ನಿಯಂತ್ರಣ ಸಾಧಿಸಿ ಈಗ ಕೆಲವು ನಿರ್ಬಂಧಗಳೊಂದಿಗೆ ಸಹಜತೆಗೆ ಮರಳುತ್ತಿರುವ ಸುದ್ದಿಗಳು ಬರುತ್ತಿವೆ. ಚೀನಾ ಸಾವಿನ ಪ್ರಮಾಣ ಇನ್ನೂ ಹೆ್ಚ್ಚಾಗಿದೆ ಅದರ ವಿವರಗಳನ್ನು ಚೀನಾ ಮುಚ್ಚಿಟ್ಟಿದೆ ಎಂದು   ಅಮೇರಿಕ ಅಪಾದಿಸುತ್ತಿದೆ. ಅಮೇರಿಕ ಕೊರೋನಾ ವೈರಸ್ ವಿರುದ್ಧ ಸರಿಯಾದ ಕ್ರಮಗಳನ್ನುತೆಗೆದುಕೊಳ್ಳುವಲ್ಲಿ ವಿಫಲವಾಗಿ ಅಲ್ಲೀಗ ಅತೀ ಹೆಚ್ಚು ಕೊರೊನಾ ಸಾವುಗಳು ದಾಖಲಾಗತೊಡಗಿದೆ. ಈಗಾಗಲೇ ಅದು 55500 ನ್ನು ದಾಟಿದೆ. ಇದು ಏಪ್ರಿಲ್ 27 ರ ಮದ್ಯಾಹ್ನದವರೆಗಿನ ಅಂಕಿ ಅಂಶವಾಗಿದೆ.          ಅದೇ ವೇಳೆಯಲ್ಲೇ ಕೊರೋನಾದಿಂದ ಗುಣಮುಖರಾದವರಲ್ಲೂ ಪುನಃ ರೋಗಲಕ್ಷಣಗಳು ಕಾಣಿಸುತ್ತಿರುವ ವರದಿಗಳೂ ಬರುತ್ತಿವೆ. ಅಲ...

ಕೋರೋನಾ ಬಿಕ್ಕಟ್ಟನ್ನು ಬಳಸುತ್ತಾ#corona#crisis#suppression

ಕೋರೋನಾ ಬಿಕ್ಕಟ್ಟನ್ನು ಬಳಸುತ್ತಾ ಮುಂದುವರೆದ ಜನಪರ ದನಿಗಳ ದಮನಿಸುವ ಕಾರ್ಯ! ದೇಶವಿಂದು ಹಿಂದೆಂದೂ ಇಲ್ಲದ ರೀತಿಯ ತೀವ್ರ ಆರ್ಥಿಕಸಂಕಷ್ಟಗಳಿಗೆ ತಳ್ಳಲ್ಪಟ್ಟಿದೆ.   ಜೊತೆಗೆ   ಕೋವಿದ್ 19 ವೈರಸ್ ನ ಸಮಸ್ಯೆಯನ್ನು   ಬಿಕ್ಕಟ್ಟನ್ನಾಗಿಸಲಾಗಿದೆ. ಅವೈಜ್ಞಾನಿಕವಾಗಿ ಹೇರಿದ   ಲಾಕ್ ಡೌನ್ ನಿಂದಾಗಿ ದೇಶದ ಬಹುಸಂಖ್ಯಾತ ಜನರ ಬದುಕಿನ ಚಟುವಟಿಕೆಗಳು ಸ್ಥಬ್ಧವಾಗಿವೆ. ವಲಸೆಕಾರ್ಮಿಕರು ನೂರಾರು ಕಿಲೋಮೀಟರು ನಡೆದು ದಣಿದು   ಹೇಗೇಗೋ ಕಷ್ಟಪಟ್ಟು ಹಲವರು ಊರು ಸೇರಿದರೆ ಹತ್ತಾರು ಜನರು ಸಾವಿಗೀಡಾಗಿದ್ದಾರೆ. ನೂರಾರು ಜನರು ಅಸ್ವಸ್ಥರಾಗಿ ನರಳುತ್ತಿದ್ದಾರೆ. ನಿರುದ್ಯೋಗ, ಆರ್ಥಿಕ ಹಾಗೂ ಆರೋಗ್ಯಗಳ ಹೊಡೆತಗಳಿಂದ ಜನರು ತತ್ತರಿಸತೊಡಗಿದ್ದಾರೆ. ಕೊರೊನಾ ಬಿಕ್ಕಟ್ಟನ್ನು ಬಳಸುತ್ತಾ ಕೋಮುವಾದಿಕರಣಗೊಳಿಸುವ ಕೆಲಸ ಬಿರುಸಿನಿಂದಲೇ ಸಾಗುತ್ತಿದೆ. ಇವೆಲ್ಲದರ ಮಧ್ಯೆಯೂ ಸರಕಾರ ಜನರ ಹಾಗೂ ದೇಶದ ಪರ ಹೋರಾಡುತ್ತಾ ಬಂದವರನ್ನು ದಮನಿಸುವ, ಬಂಧಿಸುವ ಕಾರ್ಯಗಳನ್ನು ಎಗ್ಗಿಲ್ಲದಂತೆ ನಡೆಸುತ್ತಿದೆ. ದೆಹಲಿಯ ಪೌರತ್ವ ವಿರೋಧಿ ಹೋರಾಟಗಾರರನ್ನು ಲಾಕ್ ಡೌನ್ ಸಮಯದಲ್ಲೇ ಹುಡುಕಿ ಹುಡುಕಿ ಬಂಧಿಸಲಾಗುತ್ತಿದೆ. ಸಂಘ ಪರಿವಾರ ಪ್ರಾಯೋಜಿತ 2018ರ ಭೀಮಾ ಕೋರೆಗಾಂವ್ ನ ಹಿಂಸಾಚಾರದ ನೆಪ ಹಿಡಿದು ಯುಎಪಿಎ ಯಂತಹ ಕರಾಳ ಕಾನೂನುಗಳನ್ನು ಹೇರಿ ಬಂದಿಸಿದವರಿಗೆ ನಿರಂತರವಾಗಿ ಜಾಮೀನು ನಿರಾಕರಿಸುತ್ತಾ ಬರಲಾಗುತ್ತಿದೆ. ಇದುವರೆಗೂ ಬಂಧ...

ಲಾಕ್ ಡೌನ್ ತಂದ ಬಿಕ್ಕಟ್ಟು.#lockdown# migrant labour#exodus#crisis

ಲಾಕ್ ಡೌನ್ ತಂದ ಬಿಕ್ಕಟ್ಟು.. ವಲಸೆ ಕಾರ್ಮಿಕರ ಮರುವಲಸೆ ಮುಂದೇನು… ದೆಹಲಿ, ಕೊಲ್ಕತ್ತಾ,  ಮುಂಬೈ,  ಚೆನ್ನೈ, ಬೆಂಗಳೂರು ಮಂಗಳೂರಿನಂತಹ ನಗರಗಳಿಂದು ಖಾಲಿಖಾಲಿಯೆನಿಸತೊಡಗಿವೆ. ಕೋವಿದ್ 19 ನ ಕಾರಣ ಹಿಡಿದು ದೇಶಾದ್ಯಂತ ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮವಿದು. ನಗರಗಳಿಂದ ತಮ್ಮ ತಮ್ಮ ಹಳ್ಳಿಗಳೆಡೆಗೆ ಮರುವಲಸೆಯಿಂದಾಗಿ ಇಂತಹ ಸ್ಥಿತಿಯೊಂದು ನಿರ್ಮಾಣವಾಗಿದೆ. ಪೋಲಿಸರ ಹೊಡೆತ ಬಡಿತ, ನಿಂದನೆ, ತಾತ್ಸಾರಗಳಿಗೆ ಗುರಿಯಾಗುತ್ತಿದ್ದಾರೆ. ಪ್ರಯಾಣದ ಬೇರೆ ದಾರಿ ಕಾಣದೇ ನಡೆದುಕೊಂಡು ತಮ್ಮ ತಮ್ಮಊರುಗಳಿಗೆ ತೆರಳಿದ್ದಾರೆ. ಹಾಗೆ ಸಾಗುವಾಗ ಹಸಿವು, ನೀರಡಿಕೆ, ದಣಿವುಗಳಿಗೆ ಈಡಾಗಿ ಹತ್ತಾರು ಸಾವುಗಳು ವರದಿಯಾಗಿವೆ. ಇನ್ನು ವರದಿಯಾಗದ ಎಷ್ಟು ಸಾವುಗಳಾಗಿವೆಯೋ ಅದರ ಲೆಕ್ಕ ಸಿಗದು. ಲಾಕ್ ಡೌನ್ ಕಾರಣ ಕೆಲಸವಿಲ್ಲದೇ ಆಹಾರ ಒದಗಿಸಲು ಸಾಧ್ಯವಾಗದೇ ತನ್ನ ಕರುಳಿನ ಕುಡಿಗಳನ್ನು ನದಿಗೆ ಎಸೆಯಬೇಕಾಗಿ ಬಂದ ಉತ್ತರಪ್ರದೇಶದ ದಿನಗೂಲಿ ಕಾರ್ಮಿಕ ತಾಯಿಯಂತಹ ಕತೆಗಳು ಎಷ್ಟಿವೆಯೋ ಹೇಳುವುದು ಕಷ್ಟ. ಹಲವರು ಸಾರಿಗೆ ಸಂಪರ್ಕ ಸಿಗದೇ ದೇಶದ ಹಲವು ಕಡೆಗಳಲ್ಲಿಆಹಾರ ನೀರು ಇಲ್ಲದೇ ಸೂಕ್ತ ಸಹಾಯವೂ ಸಿಗದೇ ನಗರಗಳಲ್ಲೇ ನರಳುತ್ತಿದ್ದಾರೆ. ನಗರಗಳ ನಿರ್ಮಾಣ, ನಿರ್ವಹಣೆ, ಜೀವಂತಿಕೆಗಳಿಗೆ ದೇಶದ ಹಳ್ಳಿಗಾಡು, ಸಣ್ಣಪುಟ್ಟ ಪಟ್ಟಣಗಳಿಗೆ ಸೇರಿದ ಈ ವಲಸೆ ಕಾರ್ಮಿಕರೇ ಪ್ರಧಾನ ಕಾರಣ ಕರ್ತರು. ಈ ಕಾರ್ಮಿಕರ ಕೊಡುಗೆ ಇಲ್ಲದೇ ಯಾವ...

ಜಾಗತಿಕ ಬಂಡವಾಳ ಶಾಹಿ ವ್ಯವಸ್ಥೆ# imperialist system# corona# globalpeople

ಜಾಗತಿಕ ಬಂಡವಾಳ ಶಾಹಿ ವ್ಯವಸ್ಥೆಯ ವಿಫಲತೆಯ ಕೊಡುಗೆ! ಕೊರೋನಾ ಕರಾಮತ್ತು! ಜನಜೀವನಕ್ಕೇ ಆಪತ್ತು! ನೋವಲ್ ಕೋವಿದ್ 19   ಎಂದು ಹೆಸರಿಸಲ್ಪಟ್ಟ ಕೊರೋನಾ ವೈರಸ್ ನ ಹರಡುವಿಕೆ ಇಂದು ಜಾಗತಿಕ ವ್ಯಾಪ್ತಿಗೆ ಸೇರಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಕೊರೋನಾ ಈಗಾಗಲೇ ಹರಡಿದೆ. ಕ್ಯೂಬಾ, ವೆನಜುಯೇಲಾ, ಚೀನಾ, ಸಿಂಗಪುರ, ಥಾಯ್ ಲ್ಯಾಂಡ್ ನಂತಹ ಕೆಲವು ರಾಷ್ಟ್ರಗಳು ಮಾತ್ರ ಕೊರೋನಾ ಹರಡುವಿಕೆಯನ್ನು ನಿಯಂತ್ರಣದಲ್ಲಿಟ್ಟಿವೆ. ಅಲ್ಲೆಲ್ಲಾ ಸ್ಥಳೀಯ ಮಟ್ಟದಲ್ಲಿ ಕೊರೋನಾ ಸೋಂಕು ತಗುಲುವುದು ನಿಂತಿದೆ. ಕೇವಲ ವಿದೇಶಗಳಿಂದ ಬಂದವರಿಗೆ ಮಾತ್ರ ಸೀಮಿತವಾಗಿದೆ. ಆದರೆ ಕೊರೋನಾದಂತಹ ವೈರಸ್ಸನ್ನು ತಡೆದು ನಿಲ್ಲಿಸಬೇಕಾದರೆ ಕೇವಲ ಒಂದೆರಡು ರಾಷ್ಟ್ರಗಳು ಶ್ರಮಿಸಿದರೆ ಏನೇನೂ ಸಾಲದು. ಕೆಲವು ದಿನಗಳವರೆಗೆ ಹರಡುವಿಕೆಯನ್ನು ತಡೆಯಬಹುದು ಅಷ್ಟೇ. ಬಹಳ ದಿನಗಳ ಕಾಲ ಅಂತರಾಷ್ಟ್ರೀಯ ಸಂಪರ್ಕ ಸಂವಹನಗಳಿಂದ ಹೊರತಾಗಿ ಯಾವ ರಾಷ್ಟ್ರಕ್ಕೂ ಇರಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ಸಂಪರ್ಕಗಳಿಗೆ ತೆರೆದುಕೊಂಡಾಗ ಸಹಜವಾಗಿ ಗುಣಿತದ ರೀತಿಯಲ್ಲಿ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ವೇಗವರ್ದಿತವಾಗಿ ಹರಡುವ ಗುಣವುಳ್ಳ ಈ ವೈರಸ್ ಅನ್ನು ನಿಯಂತ್ರಿಸುವುದು ಸುಲಭದ ವಿಚಾರವಲ್ಲ. ಇದರ ಹರಡುವಿಕೆಯನ್ನು ತಡೆಯಲು ದೈಹಿಕ ಅಂತರ ಕಾಪಾಡುವ, ಪ್ರತ್ಯೇಕವಾಗುಳಿಯುವ, ಕೈ, ಮುಖ, ಮೂಗು, ಬಾಯಿ, ಪರಿಸರಗಳ ಶುಚಿತ್ವ ಕಾಪಾಡುವುದು ಬಿಟ್ಟರೆ ಬೇರೆ ಪರಿಣಾಮಕಾರಿ ಔಷಧಿ ...

“ಗರ್ಭಗುಡಿ ಮತ್ತು ಇತರೆ ಕತೆಗಳು#grbhagudi# story

ಗ್ರಾಮೀಣ ಬದುಕಿನ ಸಾಮಾಜಿಕ ವಾಸ್ತವಗಳ ಸೂಕ್ಷ್ಮ ಕೃತಿ “ಗರ್ಭಗುಡಿ ಮತ್ತು ಇತರೆ ಕತೆಗಳು” ದಾವಣಗೆರೆ ಜಿಲ್ಲೆಯ   ವಿಶ್ವನಾಥನಹಳ್ಳಿ ಮೂಲದ ಪತ್ರಕರ್ತ ಹಾಗೂ ಕತೆಗಾರ ಟಿ ಎನ್ ಷಣ್ಮುಖ   ಲಂಕೇಶ್ ಪತ್ರಿಕೆ, ಪ್ರಗತಿರಂಗಗಳ ಮೂಲಕ ಸಾಮಾಜಿಕವಾಗಿ ಸಕ್ರಿಯರಾದವರು. ನಂತರ ತಮ್ಮದೇ ‘ಪ್ರಜಾಕೂಗು’ ಎಂಬ ಪತ್ರಿಕೆಯನ್ನು ಹಲವಾರು ವರ್ಷಗಳ ಕಾಲ ಮುನ್ನೆಡೆಸಿದವರು.   ಗೌರಿ, ಪರಿವರ್ತನೆ, ಅನಾವರಣ, ಮುಖ ಮತ್ತು ಮುಖವಾಡಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಇವರ ಕೃತಿಗಳು ಪ್ರಕಟಗೊಂಡಿವೆ. 2019ರಲ್ಲಿ ಇವರು ಗರ್ಭಗುಡಿ ಇತರೆ ಕತೆಗಳು ಎಂಬ ಕೃತಿಯನ್ನು ಕಾವ್ಯಕಲಾ ಪ್ರಕಾಶನದ ಮೂಲಕ ಹೊರತಂದಿದ್ದಾರೆ. ಗರ್ಭಗುಡಿ, ಚಂದ್ರ ತಂದ ಗಂಗಾಜಲ, ಬದುಕೆಂಬ ಮಾಯೆಯೊಳಗೆ, ತಮಟೆ ಸದ್ದು , ಪ್ರಣವ ಎಂಬ ಐದು ಕತೆಗಳ ಸಂಗ್ರಹ ರೂಪದ ಪುಸ್ತಕವಿದು. ಮೊದಲ ಮೂರು ಕತೆಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಕತೆಗಳಾಗಿವೆ. ಉಳಿದ ಎರಡು ಅಪ್ರಕಟಿತ ಕತೆಗಳು. ‘ಗರ್ಭಗುಡಿ’   ಬಹಳ ಹಿಂದೆಯೇ ಕಾನೂನು ಪ್ರಕಾರ ರದ್ದಾಗಿದೆ ಎಂದು ಹೇಳಲಾದ ಬಸವಿ ಪದ್ದತಿಯ ಸಾಮಾಜಿಕ ಕ್ರೌರ್ಯದ ಹಲವು ಆಯಾಮಗಳನ್ನು ಮನತಟ್ಟುವಂತೆ ತೆರೆದಿಡುವ ಕತೆ. ನಮ್ಮ ಗ್ರಾಮೀಣ ಸಮಾಜದೊಳಗೆ ಜಾತಿ ಪದ್ದತಿಯೆಂಬ ಕ್ರೌರ್ಯ ಹೇಗೆ ತಳಪಾಯದ ಸಮುದಾಯದ ಮಹಿಳೆಯರನ್ನು ತಣ್ಣಗೆನಿಸುವ ರೀತಿಯಲ್ಲಿ ಬಲಿ ಹಾಕಿಬಿಡುತ್ತದೆ ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ಈ ಕತೆ ಬಿಂಬಿಸುತ್ತದ...