ಮೀಸಲಾತಿಗೆ
ಮೀಸಲೇ ಇಲ್ಲದಂತೆ ಮಾಡಿರುವ ಜಾಗತೀಕರಣ! ?
ಜಾಗತೀಕರಣ ಪ್ರಾರಂಭವಾದಾಗಿನಿಂದ ಮೊದಲು ಸ್ವಲ್ಪ ಮಟ್ಟದಲ್ಲಿ ಇದ್ದ ಅವಕಾಶಗಳೂ ಕೂಡ ಇಲ್ಲದಂತಾಗುತ್ತಾ ಬಂದು ಇದೀಗ ಅಂತಹ ಅವಕಾಶಗಳು ಪೂರ್ಣವಾಗಿ ನಿಂತುಹೋಗುವ ಪರಿಸ್ಥಿತಿ ಬಂದಿದೆ. ಸರಕಾರ ಮಾಡಬೇಕಾಗಿದ್ದ ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಗಳು ಕಾರ್ಪೊರೆಟ್ ಗಳು ನುಂಗುತ್ತಿವೆ. ಸರಕಾರದ ಅಡಿಯಲ್ಲಿ ಯಾವ ಕ್ಷೇತ್ರವೂ ಇಲ್ಲದಂತೆ ಕಾರ್ಪೊರೆಟ್ ಗಳಿಗೆ ಬಿಟ್ಟುಕೊಡುವ ಕಾರ್ಯ ಉನ್ನತ ಘಟ್ಟಕ್ಕೆ ಬಂದು ನಿಂತಿದೆ.
ದಲಿತ ದಮನಿತರಿಗೆ ಸಾಂವಿಧಾನಿಕವಾಗಿ ಸಿಗಬೇಕಾಗಿದ್ದ ಒಂದಷ್ಟು ಅನುಕೂಲಗಳು ಕ್ಷೇತ್ರಗಳೇ ಇಲ್ಲದಿರುವುದರಿಂದಾಗಿ ಸಿಗುತ್ತಿಲ್ಲ.
ಜಾಗತೀಕರಣ ಆರಂಭವಾಗಿ ಮೂರು ದಶಕಗಳಾಗುತ್ತಾ ಬರುತ್ತಿರುವಾಗ ಭಾರತದ ಸಂಪತ್ತು ಕೆಲವೇ ಕೆಲವು ಕಾರ್ಪೊರೆಟುಗಳ ಕೈಗೆ ಹೋಗಿ ಸೇರಿಕೊಂಡಾಗಿದೆ. ಅಸಮಾನತೆಯ ಮಟ್ಟ ಇಳಿಕೆಯಾಗುವುದರ ಬದಲು ಇನ್ನಿಲ್ಲದಂತಹ ರೀತಿಯಲ್ಲಿ ಏರಿಕೆಯ ಗತಿಯಲ್ಲಿ ಧಾವಿಸುತ್ತಿದೆ.
ಜಾಗತೀಕರಣ ಆರಂಭವಾಗಿ ಮೂರು ದಶಕಗಳಾಗುತ್ತಾ ಬರುತ್ತಿರುವಾಗ ಭಾರತದ ಸಂಪತ್ತು ಕೆಲವೇ ಕೆಲವು ಕಾರ್ಪೊರೆಟುಗಳ ಕೈಗೆ ಹೋಗಿ ಸೇರಿಕೊಂಡಾಗಿದೆ. ಅಸಮಾನತೆಯ ಮಟ್ಟ ಇಳಿಕೆಯಾಗುವುದರ ಬದಲು ಇನ್ನಿಲ್ಲದಂತಹ ರೀತಿಯಲ್ಲಿ ಏರಿಕೆಯ ಗತಿಯಲ್ಲಿ ಧಾವಿಸುತ್ತಿದೆ.
ದಲಿತ ದಮನಿತರಲ್ಲಿನ ಒಂದಷ್ಟು ಅನುಕೂಲಸ್ಥರು ಇದುವರೆಗೂ ಅನುಭವಿಸಿಕೊಂಡು ಬಂದಿದ್ದ ಸವಲತ್ತುಗಳೂ ಕೂಡ ಇಲ್ಲದಂತಾಗುತ್ತಿದೆ. ಬಡ್ತಿ ಮೀಸಲಾತಿ ಅವುಗಳಲ್ಲಿ ಒಂದು.
ಚಂದ್ರಭಾನ್ ಪ್ರಸಾದ್ ರಂತಹವರು ದಲಿತರು ಬಂಡವಾಳಿಗರಾಗಿ ಕಾರ್ಪೋರೇಟುಗಳಾಗಿ ಹೊರಹೊಮ್ಮಿದರೆ ಜಾತೀಯ ದೌರ್ಜನ್ಯ ಅಸಮಾನತೆಗಳು ತಾನಾಗೇ ದೂರಸರಿದು ಬಿಡುತ್ತವೆ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ದಲಿತ ಉದ್ಯಮಿಗಳ ಪ್ರತ್ಯೇಕ ವಾಣಿಜ್ಯ ಸಂಸ್ಥೆಯಾಗಿ ದಲಿತ್ ಛೇಂಬರ್ ಆಫ್ ಕಾಮರ್ಸ್ ಸ್ಥಾಪಿಸಿ ಜಾತಿ ಅಸಮಾನತೆ ತೊಲಗಿಸುವಲ್ಲಿ ಮೈಲಿಗಲ್ಲೆಂಬಂತೆ ಅದನ್ನು ಬಿಂಬಿಸುತ್ತಿದ್ದಾರೆ. ಅಲ್ಲದೇ ಜಾಗತೀಕರಣವನ್ನು ಬಲವಾಗಿ ಪ್ರತಿಪಾದಿಸುವ ದಲಿತ ಹಿನ್ನೆಲೆಯ ಬುಧ್ಧಿ ಜೀವಿಗಳಲ್ಲಿ ಮೊದಲನೆಯ ಸ್ಥಾನದಲ್ಲಿ ಇದ್ದಾರೆ ಎನ್ನಬಹುದು.
ಇವರುಗಳು ಪ್ರತಿಪಾದಿಸುವ ದಲಿತರು ಸಾಕಷ್ಟು ಅನುಕೂಲಸ್ಥರು ಮಾತ್ರ. ಬಹುಸಂಖ್ಯಾತ ದಲಿತ ಸಮೂಹದ ಬಗ್ಗೆ ಇವರ್ಯಾರೂ ಗಮನ ಹರಿಸುತ್ತಿಲ್ಲ. ಇಂದಿಗೂ ದೇಶದ ಬಹುಸಂಖ್ಯಾತ ದಲಿತರ ಬದುಕುಗಳು ಮೂಲಭೂತವಾಗಿ ಬದಲಾಗಿಲ್ಲ ಎನ್ನುವುದಕ್ಕೆ ಉನ್ನಾವ್ ನಿಂದ ಹಿಡಿದು ಕೋರೆಗಾಂವ್, ದಾನಮ್ಮ, ಗುಡಿಬಂಡೆ, ಇತ್ಯಾದಿಯವರೆಗೂ ನೋಡಬಹುದು.
ಮೊಗಳ್ಳಿಯವರು ಜಾಗತೀಕರಣದ ಆರಂಭದಿಂದಲೂ ಅದರ ಪರವಾಗಿ ನಿಂತವರು. ಅವರ ಜಾಗತೀಕರಣ ಪರ ವಿಚಾರಗಳು ಸಾಕಷ್ಟು ವಿಮರ್ಶೆ ಟೀಕೆಗಳಿಗೆ ಒಳಗಾಗಿ ಎಲ್ಲೋ ಒಂದು ಕಡೆ ಅವರು ಅದನ್ನು ಒಂದಷ್ಟು ಮಟ್ಟದಲ್ಲಿ ಅರ್ಥ ಮಾಡಿಕೊಂಡಂತೆ ಕಂಡಿತ್ತಾದರೂ ಅವರ ಗೊಂದಲ ಈಗಲೂ ಮುಂದುವರೆದಿರುವುದು ವಿಷಾಧದ ವಿಚಾರ.

ಉನ್ನಾವ್ , ಕೋರೆಗಾಂವ್, ದಾನಮ್ಮ, ಗುಡಿಬಂಡೆಯಂತಹ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಯಾವ ಅಭಿಪ್ರಾಯವನ್ನಾಗಲೀ, ಖಂಡನೆಯನ್ನಾಗಲೀ ಮಾಡದೇ ಜಾಗತೀಕರಣದ ಕ್ರೂರ ಪರಿಣಾಮಗಳು ಮುಖಕ್ಕೆ ರಪ್ಪಂತ ರಾಚುತ್ತಿರುವಾಗಲೂ ಜಾಗತೀಕರಣದ ಪರ ವಕಾಲತ್ತು ವಹಿಸಲು ದಲಿತರನ್ನೇ ಬಳಸುತ್ತಿರುವುದು ಅಕ್ಷಮ್ಯ.
ಬಹುಸಂಖ್ಯಾತ ದಲಿತರತ್ತ ಹೊರಳಿ ನೋಡಲಾಗದ ಮಟ್ಟ ತಲುಪಿರುವವರು ಆಳುವ ಶಕ್ತಿಗಳ ಪರ ನಿಲ್ಲುತ್ತಿದ್ದಾರೆ. ಬಹುಸಂಖ್ಯಾತ ದಲಿತರನ್ನು ದಿಕ್ಕು ತಪ್ಪಿಸಲು ಈಗಲೂ ಹೆಸರಿಗಷ್ಟೇ ಇರುವ ಮೀಸಲಾತಿಯಂತಹವುಗಳ ಬಳಕೆ ಮಾಡುತ್ತಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲರ ಮೂರ್ತಿ ಸ್ಥಾಪಿಸಲು ದಲಿತರಿಗೆಂದು ಸಾಂವಿಧಾನಿಕವಾಗಿ ನಿಗದಿತವಾದ ಸಾವಿರಾರು ಕೋಟಿ ರೂಪಾಯಿಗಳನ್ನು ಅತ್ತ ತಿರುಗಿಸಿ ಬಳಸಲಾಗುತ್ತಿರುವುದರ ಕುರಿತು ಯಾವುದೇ ದ್ವನಿಯನ್ನು ಎತ್ತಲಾಗದ ಮಟ್ಟದಲ್ಲಿದ್ದಾರೆ
ಇವೆಲ್ಲವನ್ನೂ ಗಂಭೀರವಾಗಿ ಚರ್ಚೆಗೆ ಒಳಪಡಿಸುತ್ತಾ ಕಾರ್ಯೋನ್ಮುಖರಾಗಬೇಕಾದ ಕರ್ತವ್ಯ ಎಲ್ಲರದಾಗಿದೆ.
ಇವೆಲ್ಲವನ್ನೂ ಗಂಭೀರವಾಗಿ ಚರ್ಚೆಗೆ ಒಳಪಡಿಸುತ್ತಾ ಕಾರ್ಯೋನ್ಮುಖರಾಗಬೇಕಾದ ಕರ್ತವ್ಯ ಎಲ್ಲರದಾಗಿದೆ.
ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು
೨೭/೧೦/೨೦೧೮
೨೭/೧೦/೨೦೧೮
Comments
Post a Comment