ಹೆಚ್ಚಳವಾಗುತ್ತಿರುವ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಧಾಳಿಗಳು.. ಸಾಮಾಜಿಕ ಕ್ಷೋಬೆಯತ್ತ ಕರುನಾಡು# brahminical fascist attacks#karnataka# social unrest
ಹೆಚ್ಚಳವಾಗುತ್ತಿರುವ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಧಾಳಿಗಳು.. ಸಾಮಾಜಿಕ ಕ್ಷೋಬೆಯತ್ತ ಕರುನಾಡು.. -ನಂದಕುಮಾರ್ ಕುಂಬ್ರಿ ಉಬ್ಬು. ಮಿಂಚಂಚೆ: nandakumarnandana67@gmail.com ಕರ್ನಾಟಕವನ್ನು ಉತ್ತರ ಇಂಡಿಯಾದ ತರಹದ ಅದರಲ್ಲೂ ಉತ್ತರಪ್ರದೇಶ ರಾಜ್ಯದ ರೀತಿಯಲ್ಲಿ ಬದಲಾಯಿಸಲಾಗುತ್ತಿದೆಯೇ ಎಂಬ ಅನುಮಾನಗಳು ಸಾಕಷ್ಟು ಜನರಲ್ಲಿ ಮೂಡತೊಡಗಿ ಬಹಳ ಕಾಲವಾಗಿದೆ. ಅದಕ್ಕೆ ಪೂರಕವಾಗಿ ಉತ್ತರ ಇಂಡಿಯಾದ ಹಲವಾರು ರಾಜ್ಯಗಳಲ್ಲಿ ನಡೆಯುವ ರೀತಿಯ ನೂರಾರು, ಸಾವಿರಾರು ಘಟನೆಗಳನ್ನು ಹಾಗೂ ಪ್ರಕರಣಗಳನ್ನು ಕರ್ನಾಟಕ ಕಾಣಲು ತೊಡಗಿ ಬಹಳ ಕಾಲವಾಗಿದೆ. ಪ್ರೀತಿ, ಪ್ರೇಮ, ಅಂತರ್ ಧರ್ಮ ಮದುವೆ, ಅಂತರ್ಜಾತಿ ಮದುವೆಗಳು; ಗಂಡು ಹೆಣ್ಣು ಮನುಷ್ಯ ಮನುಷ್ಯರ ನಡುವಿನ ಸಹಜ ಸ್ನೇ...