ಕೇರಳದ ಎಡರಂಗ ಸರ್ಕಾರದ ವೈರುಧ್ಯಗಳೂ#ಸಿಲ್ವರ್ ಲೈನ್ ರೈಲು ಯೋಜನೆ ಹುಟ್ಟುಹಾಕಿದ ಜನಪ್ರತಿಭಟನೆಗಳೂ#kerala left front#silverline semi highspeed train
ಕೇರಳದ ಎಡರಂಗ ಸರ್ಕಾರದ ವೈರುಧ್ಯಗಳೂ… ಸಿಲ್ವರ್ ಲೈನ್ ರೈಲು ಯೋಜನೆ ಹುಟ್ಟುಹಾಕಿದ ಜನಪ್ರತಿಭಟನೆಗಳೂ… -ನಂದಕುಮಾರ್ ಕೆ .ಎನ್. ಕುಂಬ್ರಿ ಉಬ್ಬು ಮಿಂಚಂಚೆ: nandakumarnandana67@gmail.com ಪಕ್ಕದ ಕೇರಳ ರಾಜ್ಯ ಕೆಲವು ತಿಂಗಳುಗಳಿಂದ ಹಲವಾರು ಸುದ್ಧಿಗಳಿಗೆ ಕಾರಣವಾಗುತ್ತಿದೆ. ಕೊರೋನಾ ಮೊದಲ ಬಾರಿ ಕಾಣಿಸಿಕೊಂಡ ರಾಜ್ಯ ಹಾಗೇನೆ ಅದನ್ನು ಸಮರ್ಥವಾಗಿ ನಿಭಾಯಿಸಿದ ರಾಜ್ಯವೂ ಕೇರಳವೆಂದು ದೇಶ ಅಲ್ಲದೇ ಅಂತರಾಷ್ಟ್ರೀಯವಾಗಿಯೂ ಸುದ್ಧಿ ಮಾಡಿತ್ತು. ಕೇರಳ ಸುಮಾರು ಮೂರುಮುಕ್ಕಾಲು ಕೋಟಿ ಜನಸಂಖ‍್ಯೆಯ ರಾಜ್ಯ. ದೇಶಾದ್ಯಂತ ಕೇರಳಿಯರು ಹರಡಿದ್ದಾರೆ. ಅಮೇರಿಕ, ಯೂರೋಪು, ಏಷಿಯಾ, ಆಫ್ರಿಕಾ ಖಂಡದ ರಾಷ್ಟ್ರಗಳು ಅಲ್ಲದೇ ಗಲ್ಫ್ ರಾಷ್ಟಗಳಲ್ಲೂ ಕೇರಳೀಯರು ಹರಡಿಕೊಂಡಿದ್ದಾರೆ. ಪ್ರತಿ ಮನೆಯಿಂದ ಒಬ್ಬಿಬ್ಬರಾದರೂ ಹೊರರಾಷ್ಟ್ರಗಳಲ್ಲಿ ದುಡಿದು ಕೇರಳಕ್ಕೆ ಹಣ ಕಳಿಸುತ್ತಾರೆ. ಕೊರೋನಾ ಮೂಲಕ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಸಾಕಷ್ಟು ಜನರು ಹೊರದೇ...