Skip to main content

Posts

Showing posts from June, 2021

ಮಲೆನಾಡಿನ ರಸ್ತೆ ಅಗಲೀಕರಣವೂ#road widening in malnad#western ghats#corporate#land slides

  ಮಲೆನಾಡಿನ ರಸ್ತೆ ಅಗಲೀಕರಣವೂ ..          ಭಾರಿ ಕಾರ್ಪೋರೇಟು ಹಿತಾಸಕ್ತಿಗಳೂ...                       ನೆರೆ ಪ್ರವಾಹ, ಭೂಕುಸಿತಗಳೂ...                              ಕಳೆದ ನೂರಾರು ವರುಷಗಳಿಂದ ಮಲೆನಾಡಿನ ಬೆಟ್ಟಗುಡ್ಡಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದ ಹಲವಾರು ರಸ್ತೆಗಳು ಈಗ ಭಾರಿ ಅಗಲವಾಗತೊಡಗಿವೆ. ಬಿಳಿ ಪಟ್ಟಿಗಳು , ಹಳದಿ ಪಟ್ಟಿಗಳು , ಕಬ್ಬಿಣದ ಬದಿತಡೆಗಳನ್ನು ಪಡೆಯತೊಡಗಿವೆ.                                  ಈ ರಸ್ತೆಗಳು ಮೂಲದಲ್ಲಿ ದಲಿತ ದಮನಿತರು, ಆದಿವಾಸಿಗಳು ನಡೆದು ಕಡಿದು ನಿರ್ಮಿಸಿದ ಕಾಲುದಾರಿಗಳಾಗಿ ಬಹಳ ಕಾಲ ಉಳಿದಿದ್ದವು. ನಂತರ ಜನರು ಚಕ್ಕಡಿ/ಗಾಡಿದಾರಿಗಳಾಗಿ ಮಾಡಿಕೊಂಡಿದ್ದರು. ಕಚ್ಚಾ ರಸ್ತೆಗಳಾಗಿ ನಂತರ ಜಲ್ಲಿರಸ್ತೆಗಳಾಗಿ ನಂತರ   ಡಾಂಬರುಗಳನ್ನು ಕಂಡು ಬಸ್ಸುಗಳು ಓಡಾಡುವ ರಸ್ತೆಗಳಾಗಿ ಮಾರ್ಪಟ್ಟು ಬಹಳ ಕಾಲವಾಗಿದ್ದವು. ನೂರಾರು , ಸಾವಿರಾರು , ಲಕ್ಷಾಂತರ , ...

ಕೊವಿದ್ 19#ಬಿಕ್ಕಟ್ಟಿನ ಆಯಾಮಗಳು#covid19# crisis#Aspects

ಕೊವಿದ್ ೧೯ ತಂದಿಕ್ಕಿರುವ ಬಿಕ್ಕಟ್ಟಿನ ಆಯಾಮಗಳು! ಉತ್ತರ ಸಿಗದ ಪ್ರಶ್ನೆಗಳು ! ದೇಶದಲ್ಲಿ ಕೊರೋನಾದ ಮೊದಲ ಪ್ರಕರಣ ಶುರುವಾದ ಮೇಲಿನಿಂದ ಇಲ್ಲಿಯವರೆಗೂ ಸುಮಾರು ಒಂದೂವರೆ ವರುಷಗಳಿಗೂ ಹೆಚ್ಚು ಕಾಲವಾಯಿತು. ಕೋವಿದ್ ೧೯ ರ ಬಗ್ಗೆ ಅದಕ್ಕೂ ಹಲವು ತಿಂಗಳ ಮೊದಲೇ ಚೀನಾ , ಅಮೇರಿಕ ಯೋರೋಪಿನಾದ್ಯಂತ ಮಾಹಿತಿಗಳೂ ತಪ್ಪುಮಾಹಿತಿಗಳೂ ಸಾಕಷ್ಟು ಹರಿದಾಡುವುದು, ಹರಿದಾಡಿಸುವುದೂ ನಡೆದಿದ್ದವು. ಸ್ಯಾನಿಟೈಸರ್ , ಮುಖಗವುಸು , ರೆಮ್ಡಿಸೆವಿರ್ , ಪ್ಯಾರಾಸೆಟಾಮಾಲ್ , ಸ್ಟೀರಾಯ್ಡ್ , ಆಂಟಿ ಬಯೋಟಿಕ್ಸ್ ಗಳ ಬಳಕೆ , ಅಪಬಳಕೆಗಳೂ , ಲಾಕ್ ಡೌನ್ ಘೋಷಣೆಗಳೂ ನಡೆದಿದ್ದವು.   ಕೆಲವು ರಾಷ್ಟ್ರಗಳು ಇವೇನೂ ಮಾಡದೇ ಕೊರೋನಾ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ವರದಿಗಳೂ ಇದ್ದವು. ಈಗ ಅಲ್ಲೆಲ್ಲಾ ಲಸಿಕೆ ಮಾತ್ರ ಸಾಕು ಉಳಿದವೇನೂ ಬೇಕಾಗಿಲ್ಲ ಎಂಬ ತೀರ್ಮಾನಗಳು ಹೊರಬೀಳತೊಡಗಿವೆ.   ಇಂಡಿಯಾದಲ್ಲಿ ಕೊರೋನಾ ಸಂಧರ್ಭದಲ್ಲಿ ರೈತಾಪಿಗಳ ಹೋರಾಟ ತನ್ನ ವ್ಯಾಪ್ತಿಯನ್ನು ದೇಶದ ರಾಜಧಾನಿ ಹಾಗೂ ಇತರ ಭಾಗಗಳಿಗೆ ಹರಡುವುದು ವೇಗಗೊಂಡಿತು. ಹಾಗೆ ಅದು ಚಾರಿತ್ರಿಕವಾಗಿ ಹೊಸ ಹೋರಾಟ ಮಾದರಿಯಾಗಿ ಸ್ಥಾಪಿತವಾಯಿತು. ಲಕ್ಷಾಂತರ ರೈತರು ಪಂಜಾಬ್ , ಹರ್ಯಾಣ , ಉತ್ತರಪ್ರದೇಶ , ರಾಜಸ್ತಾನ್ , ಮಧ್ಯಪ್ರದೇಶ , ಗುಜರಾತ್ ಸೇರಿದಂತೆ ಹಲವಾರ ರಾಜ್ಯಗಳ ರೈತಾಪಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ದೆಹಲಿ ಗಡಿಗಳಲ್ಲಿ ಜಮಾವಣೆಗೊಂಡು ಪ್ರತಿಭಟನೆಯಲ್ಲಿ ಇಲ್ಲಿಯವರೆಗೂ ಭಾಗವಹ...

ಕೇರಳ ಅಭಿವೃದ್ಧಿ ಮಾದರಿ#kerala model of development#kerala politics

  ಕೇರಳ ಅಭಿವೃದ್ಧಿ ಮಾದರಿ ಮತ್ತು ಕೇರಳದ ರಾಜಕೀಯ                                                          -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು ಇಂಡಿಯಾದ ದಕ್ಷಿಣದ ತುದಿಯ ಪಶ್ಚಿಮಕ್ಕೆ ಬಾಚಿಯಂತೆ ಚಾಚಿಕೊಂಡಿರುವ ಪುಟ್ಟ ರಾಜ್ಯ ಕೇರಳ. ಸುಮಾರು ಮೂರುವರೆ ಕೋಟಿ ಜನಸಂಖ್ಯೆಯಿರುವ ಈ ರಾಜ್ಯದ ಶೇಕಡಾ 97ಕ್ಕೂ ಹೆಚ್ಚು ಜನರು ವ್ಯವಹರಿಸುವ ಪ್ರಮುಖ ಆಡುಭಾಷೆ   ಮಲೆಯಾಳಂ. ಆದರೆ ತುಳು, ಕನ್ನಡ, ತಮಿಳು, ಕೊಂಕಣಿ, ಕೊಡವ, ಕೊರಗ, ಜೇನು ಕುರಂಬ,ಇರುಳ ಮೊದಲಾದ ಸುಮಾರು ನಲವತ್ತಕ್ಕೂ ಹೆಚ್ಚು ಆಡುಭಾಷೆಗಳ ಜನರು ಇಲ್ಲಿದ್ದಾರೆ.   2011ರ ಗಣತಿಯ ಪ್ರಕಾರ 16,027,412 ಪುರುಷರಿದ್ದರೆ 17,378,649 ಜನ ಮಹಿಳೆಯರಿದ್ದಾರೆ. ಕೇರಳದ ಲಿಂಗ ಅನುಪಾತದ ಪ್ರಮಾಣ ಸಾವಿರದ ಎಂಬತ್ತು ಮಹಿಳೆಯರಿಗೆ ಸಾವಿರ ಪುರುಷರು ಎಂದಾಗಿದೆ. ಫಲವಂತಿಕೆಯ ಪ್ರಮಾಣ 2016ರ ನೀತಿ ಆಯೋಗದ ವರದಿ ಪ್ರಕಾರ 1.8 ರಷ್ಟಿದೆ. 2020-21ರ ಅಂಕಿ ಅಂಶದ ಪ್ರಕಾರ ಕೇರಳದ ಒಟ್ಟು ರಾಜ್ಯದ ಉತ್ಪಾದನೆ (ಜಿಡಿಪಿ) 9.8ಲಕ್ಷ ಕೋಟಿಗಳಾಗಿವೆ. ದೇಶದ ಮಟ್ಟದಲ್ಲಿ ಜಿಡಿಪಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಜಿಡಿಪಿ ಬೆಳವಣಿಗೆ ದರ ಶೇಕಡಾ11.6 ರಷ್ಟಿದೆ. 2018ರ ...

ಕೂದುವಳ್ಳಿಯ ಹೂವಪ್ಪ ಬಿಟ್ಟು ಹೋದ ಹೆಜ್ಜೆಗುರುತುಗಳು# Hoovappa# Activist#Advocate#Human rights# struggle#Chickmagaluru

  ಕೂದುವಳ್ಳಿಯ ಹೂವಪ್ಪ ಬಿಟ್ಟು ಹೋದ ಹೆಜ್ಜೆಗುರುತುಗಳು … ಉಳಿಸಿಹೋದ ಆಶಯ ಹಾಗೂ ಹೋರಾಟದ ಸ್ಪೂರ್ತಿಗಳು … ಬಯಲಾಗುತ್ತಿರುವ ಆಳುವವರ ಕೊರೋನಾ ಹಿಂದಿನ ಕ್ರೂರ ಹುನ್ನಾರಗಳು …      ಜನಪರ ವಕೀಲ, ದುಡಿಯುವ ಜನಸಾಮಾನ್ಯರ ಒಡನಾಡಿಯಾಗಿದ್ದ, ಮಾನವ ಹಕ್ಕು ಕಾರ್ಯಕರ್ತರಾಗಿದ್ದ ಹೂವಪ್ಪ ಕೊನೆಯುಸಿರು ಎಳೆದಿದ್ದಾರೆ.. ಜಾತಿ ವಿನಾಶ ವೇದಿಕೆ, ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಒಕ್ಕೂಟ, ಕೋಮುಸೌಹಾರ್ಧ ವೇದಿಕೆ ಮೊದಲಾದ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯ ಪದಾದಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಹೂವಪ್ಪ ತಮ್ಮ ಜೀವನದ ಅಂತಿಮ ಯಾತ್ರೆಯನ್ನು ಕಳೆದ ಮೇ 31ರ ಸಂಜೆಯ ವೇಳೆಗೆ ಮುಗಿಸಿದ್ದಾರೆ. ಻ಅವರು ಸಮಾಜದಲ್ಲಿರುವ ಜಾತೀಯತೆಯ ವಿರುದ್ಧ ಕಾರ್ಯ ನಿರ್ವಹಿಸುತ್ತಿದ್ದ ಜಾತಿ ವಿನಾಶ ವೇದಿಕೆಯ ರಾಜ್ಯ ಸಮಿತಿಯ ಸದಸ್ಯರಾಗಿಯೂ ಅವರು ಕೆಲಸ ಮಾಡಿದ್ದರು. ಕೊರೊನಾ ನಿರ್ಭಂಧಗಳ ಮಧ್ಯೆಯೂ ಅವರ ಸ್ಮರಣ ಸಭೆಗಳು ನಾಡಿನ ಹಲವಾರು ಕಡೆಗಳಲ್ಲಿ ನಡೆಯ ತೊಡಗಿವೆ. ಕೊರೋನಾ ಕಾರಣದಿಂದಾಗಿ ಅವರ ಅಂತಿಮ ದರ್ಶನ ಮಾಡಲು ಸಾಧ್ಯವಾಗದೇ ಹೋಗಿದ್ದು ನಾಡಿನ ಹಲವರಿಗೆ ಅಪಾರ ನೋವು ತಂದಿದೆ.     ಹೂವಪ್ಪರು ಚಿಕ್ಕಮಗಳೂರು ಸಮೀಪದ ಕೂದುವಳ್ಳಿ ಎಂಬ ಹಳ್ಳಿಯವರು. ಬಡ ದಲಿತ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಿಂದಲೂ ಸಮಾಜದಲ್ಲಿ ದಲಿತರ ಮೇಲಾಗುವ ಅಸ್ಪೃಶ್ಯತೆ ದಮನ ದೌರ್ಜನ್ಯಗಳನ್ನು ಸ್ವತಃ ಅನುಭವಿಸುತ್ತಾ, ನ...