Skip to main content

Posts

Showing posts from March, 2026

ಜಾಗತಿಕ ಯುದ್ಧ#world war# America

  ಜಾಗತಿಕ ಯುದ್ಧದ ಹೊಸ್ತಿಲಲ್ಲಿ ….                                                                                                                                        -  ನಂದಕುಮಾರ್   ಕುಂಬ್ರಿ   ಉಬ್ಬು ಜಗತ್ತು ಜಾಗತಿಕ ಯುದ್ಧದ ಹೊಸ್ತಿಲಲ್ಲಿದೆ . ಅಣ್ವಸ್ತ್ರ ಬಳಕೆಗಳ ಅಪಾಯವೂ ತೀವ್ರವಾಗುತ್ತಿದೆ . ರಷ್ಯ ನೇರವಾಗಿಯೇ ಈ ವಿಚಾರವನ್ನು ಹಲವಾರು ಸಲ ಹೇಳುತ್ತಾ ಬರುತ್ತಿದೆ . ಈಗ ಮತ್ತೆ ಹೇಳಿದೆ . ತನ್ನ ಅಣ್ವಸ್ತ್ರವುಳ್ಳ ಜಲಾಂತರ್ಗಾಮಿಯನ್ನು ತೈಲ ಹಡಗುಗಳ ರಕ್ಷಣೆಗೆ ನಿಯೋಜಿಸಿದೆ . ವೆನೆಜುವೇಲಾದ ಮೇಲೆ ಅಂತರಾಷ್ಟ್ರೀಯ ಒಪ್ಪಂದಗಳು , ವಿಶ್ವ ಸಂಸ್ಥೆಯ ನಿಯಮಗಳು , ಅಂತರಾಷ್ಟ್ರೀಯ ನಿಯಮಗಳು ... ಎಲ್ಲವನ್ನೂ ಉಲ್ಲಂಘಿಸುತ್ತಾ ದಿಗ್ಬಂ...

ಮಲೆನಾಡಿನಲ್ಲಿ ಆನೆ #malenadu# elephant#

  ಮಲೆನಾಡಿನಲ್ಲಿ ಆನೆ ಓಡಾಟದ ಹಿಂದೆ… ಮಲೆನಾಡಿನ ಶೃಂಗೇರಿ ಕೊಪ್ಪ ಭಾಗಗಳಲ್ಲಿ ಮೊದಲೆಲ್ಲಾ ಆನೆ ಓಡಾಟ ಇರಲಿಲ್ಲ . ಈಗದು ಶುರುವಾಗಿ ಒಂದೆರಡು ವರುಷ ಆಗಿದೆ . ಆನೆಯ ಕಾರಣದಿಂದ ಪ್ರಾಣಹಾನಿ ಬೆಳೆಹಾನಿಗಳಾಗತೊಡಗಿವೆ . ಈ ನೆಪ ಹಿಡಿದು ನಮಗೆ ಪರಿಹಾರ ಕೊಡಿ ನಾವು ಒಕ್ಕಲೆದ್ದು ಹೋಗುತ್ತೇವೆ ಎಂದು ಆಗ್ರಹಿಸಿ ಹೋರಾಟದ ಪ್ರಹಸನವನ್ನೂ ಕೂಡ ಕೆಲವು ಶಕ್ತಿಗಳು ಮಾಡಿದವು . ಜನವಿರೋಧಿ ಹಾಗೂ ಪರಿಸರ ವಿರೋಧಿ ಅರಣ್ಯ ಯೋಜನೆಗಳು ಹಾಗೂ ಒಕ್ಕಲೆಬ್ಬಿಸುವುದರ ವಿರುದ್ಧ ಕೆಲವು ದಶಕಗಳಿಂದ ದಿಟ್ಟ ಹಾಗೂ ರಾಜಿರಹಿತ ಹೋರಾಟಗಳನ್ನು ಮಾಡುತ್ತಾ ಬಂದ ಆದಿವಾಸಿಗಳು ಇನ್ನಿತರ ಜನಸಮೂಹಗಳು ವಾಸ ಮಾಡುತ್ತಿರುವ ಪ್ರದೇಶವಿದು ಎನ್ನೋದನ್ನು ಇಲ್ಲಿ ಗಮನಿಸಬೇಕು . ಇದಾಗಿ ಕೆಲವು ದಿನಗಳ ನಂತರ ಹತ್ತಾರು ವರುಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಸುಮಾರು ಎರಡು ಏಕರೆಯಷ್ಟು ತೋಟವನ್ನು ಅರಣ್ಯ ಇಲಾಖೆ ಕಡಿದು ನಾಶ ಮಾಡಿ ಕಾಡುಗಿಡಗಳನ್ನು ನೆಟ್ಟು ಆ ಕುಟುಂಬವನ್ನು ಬಲ ಪ್ರಯೋಗಿಸಿ ಒಕ್ಕಲೆಬ್ಬಿಸಿರುವ ಘಟನೆ ಶೃಂಗೇರಿ ಕಡೆಯಿಂದ ವರದಿಯಾಗಿದ್ದನ್ನು ಗಮನಿಸಬಹುದು . ಮಲೆನಾಡಿನಲ್ಲಿ ಹುಲಿಗಳು ಇರಲಿಲ್ಲ . ಈಗ ಹುಲಿಗಳು ಕಾಣತೊಡಗಿವೆ . ದನಕರುಗಳನ್ನು ತಿನ್ನತೊಡಗಿವೆ . ಚಾಮರಾಜನಗರ ಭಾಗದಲ್ಲಿ ಹುಲಿದಾಳಿಗಳಿಂದ ಮಾನವ ಪ್ರಾಣಹಾನಿಗಳು ಹೆಚ್ಚತೊಡಗಿವೆ . ...