Skip to main content

Posts

Showing posts from January, 2026

ಕನ್ನಡವೆಂದರೆ#ಬದುಕಿನ ಬಾಶೆ# kannada# language of life

 ಕನ್ನಡವೆಂದರೆ ಭುವನೇಶ್ವರಿಯೂ ಅಲ್ಲ ಚಾಮುಂಡಿಯೂ ಅಲ್ಲ ಕನ್ನಡವೆಂದರೆ ನಾಡಿನ ಬಹುಸಂಖ್ಯಾತ ಜನರ ಬದುಕಿನ ಬಾಶೆ ನಾಡೆಂದರೆ ದೇವರಲ್ಲ ನಾಡೆಂದರೆ ಜನಸಮುದಾಯಗಳ ಸಾಮೂಹಿಕ ಬದುಕಿನ ಬೀಡು ಬದುಕಿನ ಹಾಡುಪಾಡು ಬೆವರಿನ ಭೂಮಿ ತ್ಯಾಗದ ಫಲ ಕರ್ನಾಟಕವೆಂದರೆ ಮೈಸೂರು ಮಾತ್ರವಲ್ಲ  ಬ್ರಾಹ್ಮಣಿಕೆಯ ಆಚರಣೆಗಳು ಬಹುಸಂಖ್ಯಾತ ನಾಡುನುಡಿಯ ಭಾಗವಲ್ಲ ಬಾಶೆಯೆಂದು ದೇವರಾಗಬಾರದು. ನಾಡೆಂದೂ ದೇವರಾಗಬಾರದು ನಾಡುನುಡಿಯೆಂದೂ ಪೂಜಾಸ್ಥಾವರವಾಗಬಾರದು ಪೂಜಾಸ್ಥಾವರವಾದರೆ ಅವುಗಳ ಸರ್ವನಾಶವೆಂದರ್ಥ ಬಂಡಾಯವೆಂದರೆ ಪ್ರತಿಗಾಮಿ ಸಂಧಾನವಾಗಬಾರದು ಅದು ಸ್ವಾರ್ಥವೆಂದರ್ಥ ಬಂಡಾಯವೆಂದರೆ ಪುರೋಗಾಮಿ ಸಂಧಾನವಾಗಬಹುದು. ಅದು ಸಾಮೂಹಿಕ ಹಿತವೆಂದರ್ಥ ೨೯/೦೮/೨೦೨೫.                                  - ನಂದಕುಮಾರ್ ಕುಂಬ್ರಿ ಉಬ್ಬು..

ಬಿಕ್ಕಟ್ಟು#ಜಾಗತಿಕ ವ್ಯವಸ್ಥೆ#ಇಂಡಿಯಾ#Crisis#Global#India

  ಬಿಕ್ಕಟ್ಟುಗಳ ಪರಾಕಾಷ್ಠೆಯತ್ತ ಜಾಗತಿಕ ವ್ಯವಸ್ಥೆ.. ಬಿಕ್ಕಟ್ಟಿನತ್ತ ಇಂಡಿಯಾ..                                                                                                                                                                   - ನಂದಕುಮಾರ್‌ ಕುಂಬ್ರಿ ಉಬ್ಬು ಕಳೆದ   ಏಪ್ರಿಲ್‌ ತಿಂಗಳ ಇಪ್ಪತ್ತೆರಡನೇ ತಾರೀಕು ಕಾಶ್ಮೀರದ ಪಹಲ್ಗಾಂವ್‌ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆದು ಇಪ್ಪತ್ತಾರು ಜನರನ್ನು ಬಲಿ ಪಡೆಯಲಾಯಿತು . ಬಲಿಯಾದವರಲ್ಲಿ ಇಪ್ಪತ್ತೈದು ಜನರು ಮುಸ್ಲಿಮೇತರರು ಒಬ್ಬರು ಮುಸ್ಲಿಮರು ಆಗಿದ್ದಾರೆ ಎಂಬ ವರದಿಯಿದೆ. ಈ ಮುಸ್ಲಿಮ್‌ ವ್...

ಮರೀಚಿಕೆ#ಅಶಾಂತಿ#ಕಾನೂನು#India#law#justice

  ಮರೀಚಿಕೆಯಾಗುತ್ತಿರುವ ಕಾನೂನು ನ್ಯಾಯ ಅಶಾಂತಿಯ ಬೀಡಾಗಬಹುದೇ ಇಂಡಿಯಾ …                                                                                                                           -ನಂದಕುಮಾರ್‌ ಕುಂಬ್ರಿಉಬ್ಬು ಪಕ್ಕದ ರಾಜ್ಯ ಕೇರಳಮ್‌ ನ ಮಲೆಯಾಳಂ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದ ಸಿನಿಮಾ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಕಳೆದ ಎಂಟು ವರುಷಗಳಿಂದ ದೂರು, ಪ್ರಥಮ ಮಾಹಿತಿ ವರದಿ, ತನಿಖೆ, ಬಂಧನ, ವಿಚಾರಣೆಯ ಹಂತಗಳು ಮುಗಿದು ಕೆಲವು ದಿನಗಳ ಹಿಂದೆ ತೀರ್ಪು ಹೊರಬಿದ್ದಿದೆ. ಈ ಪ್ರಕರಣದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಪಲ್ಸರ್‌ ಸುನಿ ಮತ್ತು ಆತನ ಸಂಗಡಿಗ ಅಪರಾಧಿಗಳಿಗೆ ಇಪ್ಪತ್ತು ವರುಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಚಾರಣಾ ನ್ಯಾಯಾಲಯ ನೀಡಿದೆ. ಆದರೆ ಈ ಕೃತ್ಯವನ್ನು ಸುಪಾರಿ ಕೊಟ್ಟು ಮಾಡಿಸಲಾಗಿದೆ ಎಂದು ಅದನ್ನು ಮಾಡಿಸಿದ್ದು ಮಲೆಯಾಳಮ್‌ ಚ...