Skip to main content

Posts

Showing posts from October, 2019

ಮೀಸಲಾತಿಗೆ ಮೀಸಲೇ ಇಲ್ಲದಂತೆ -reservation,-globalisation

ಮೀಸಲಾತಿಗೆ ಮೀಸಲೇ ಇಲ್ಲದಂತೆ ಮಾಡಿರುವ ಜಾಗತೀಕರಣ! ? ಜಾಗತೀಕರಣ ಪ್ರಾರಂಭವಾದಾಗಿನಿಂದ ಮೊದಲು ಸ್ವಲ್ಪ ಮಟ್ಟದಲ್ಲಿ ಇದ್ದ ಅವಕಾಶಗಳೂ ಕೂಡ ಇಲ್ಲದಂತಾಗುತ್ತಾ ಬಂದು ಇದೀಗ ಅಂತಹ ಅವಕಾಶಗಳು ಪೂರ್ಣವಾಗಿ ನಿಂತುಹೋಗುವ ಪರಿಸ್ಥಿತಿ ಬಂದಿದೆ . ಸರಕಾರ ಮಾಡಬೇಕಾ ಗಿ ದ್ದ ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಗಳು ಕಾರ್ಪೊರೆಟ್ ಗಳು ನುಂಗುತ್ತಿವೆ . ಸರಕಾರದ ಅಡಿಯಲ್ಲಿ ಯಾವ ಕ್ಷೇತ್ರವೂ ಇಲ್ಲದಂತೆ ಕಾರ್ಪೊರೆಟ್ ಗಳಿಗೆ ಬಿಟ್ಟುಕೊಡುವ ಕಾರ್ಯ ಉನ್ನತ ಘಟ್ಟಕ್ಕೆ ಬಂದು ನಿಂತಿದೆ . ದಲಿತ ದಮನಿತರಿಗೆ ಸಾಂವಿಧಾನಿಕವಾಗಿ ಸಿಗಬೇಕಾಗಿದ್ದ ಒಂದಷ್ಟು ಅನುಕೂಲಗಳು ಕ್ಷೇತ್ರಗಳೇ ಇಲ್ಲದಿರುವುದರಿಂದಾಗಿ ಸಿಗುತ್ತಿಲ್ಲ . ಜಾಗತೀಕರಣ ಆರಂಭವಾಗಿ ಮೂರು ದಶಕಗಳಾಗುತ್ತಾ ಬರುತ್ತಿರುವಾಗ ಭಾರತದ ಸಂಪತ್ತು ಕೆಲವೇ ಕೆಲವು ಕಾರ್ಪೊರೆಟುಗಳ ಕೈಗೆ ಹೋಗಿ ಸೇರಿಕೊಂಡಾಗಿದೆ . ಅಸಮಾನತೆಯ ಮಟ್ಟ ಇಳಿಕೆಯಾಗುವುದರ ಬದಲು ಇನ್ನಿಲ್ಲದಂತಹ ರೀತಿಯಲ್ಲಿ ಏರಿಕೆಯ ಗತಿಯಲ್ಲಿ ಧಾವಿಸುತ್ತಿದೆ . ದಲಿತ ದಮನಿತರಲ್ಲಿನ ಒಂದಷ್ಟು ಅನುಕೂಲಸ್ಥರು ಇದುವರೆಗೂ ಅನುಭವಿಸಿಕೊಂಡು ಬಂದಿದ್ದ ಸವಲತ್ತುಗಳೂ ಕೂಡ ಇಲ್ಲದಂತಾಗುತ್ತಿದೆ . ಬಡ್ತಿ ಮೀಸಲಾತಿ ಅವುಗಳಲ್ಲಿ ಒಂದು . ಚಂದ್ರಭಾನ್ ಪ್ರಸಾದ್ ರಂತಹವರು ದಲಿತರು ಬಂಡವಾಳಿಗರಾಗಿ ಕಾರ್ಪೋರೇಟುಗಳಾಗಿ ಹೊರಹೊಮ್ಮಿದರೆ ಜಾತೀಯ ದೌರ್ಜನ್ಯ ...

ಆರ್ ಸಿ ಇ ಪಿ ಒಪ್ಪಂದ -RCEP, china-partnership

ಆರ್ ಸಿ ಇ ಪಿ ಒಪ್ಪಂದ ವ್ಯಾಪಾರಿ ಪಾಲುದಾರಿಕೆಯೋ !? ಭಾರತದ ಅಳಿದುಳಿದ ಆರ್ಥಿಕತೆಯನ್ನು ಚೀನದಂತಹ ಜಾಗತಿಕ ಶಕ್ತಿಗಳಿಗೆ ಒಪ್ಪಿಸುವ ಹುನ್ನಾರವೋ !? ಚೀನ ಇಂದು ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಸುಮಾರು 140 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ದೇಶ ಜಾಗತಿಕವಾಗಿ   ವಿಸ್ತೀರ್ಣದಲ್ಲಿ ಮೂರನೇ ಅತೀ ದೊಡ್ಡ ದೇಶವಾಗಿದೆ. 2018ರ ಅಂಕಿ ಅಂಶದ ಪ್ರಕಾರ ಚೀನ 13.28 ಟ್ರಿಲಿಯನ್ ಅಮೇರಿಕನ್ ಡಾಲರ್ ಗಳ   ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದೆ. ಕೊಳ್ಳುವ ಶಕ್ತಿಯ ಮಾನದಂಡದ ಪ್ರಕಾರ ಚೀನ ಜಗತ್ತಿನ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಜಗತ್ತಿನ ಅತೀ ದೊಡ್ಡ ವಸ್ತು ಹಾಗೂ ಸೇವೆಗಳ ಉತ್ಪಾದನೆ ಮತ್ತು ರಫ್ತುದಾರ ದೇಶವಾಗಿದ್ದರೆ, ಜಗತ್ತಿನ ಎರಡನೇ ಅತೀ ದೊಡ್ಡ ಕಚ್ಚಾ ವಸ್ತುಗಳು ಆಮದು ಮಾಡಿಕೊಳ್ಳುವ ದೇಶ. ಜಾಗತಿಕವಾಗಿ ಅತೀ ದೊಡ್ಡ ಸೈನಿಕ ಶಕ್ತಿಯಿರುವ ಚೀನ, ಎರಡನೇ ಅತೀ ದೊಡ್ಡ ರಕ್ಷಣಾ ಆಯವ್ಯಯವನ್ನು ಹೊಂದಿರುವ ದೇಶವಾಗಿದೆ. ಅಣ್ವಸ್ತ್ರಗಳನ್ನು ಹೊಂದಿರುವ ಚೀನಾ ಜಾಗತಿಕ ಬೆಳವಣಿಗೆಗಳ ಮೇಲೆ ನಿರ್ಣಾಯಕ ಪ್ರಭಾವ ಬೀರುವ ದೇಶವಾಗಿದೆ. ಮೊಬೈಲುಗಳು , ಗಣಕ ಯಂತ್ರಗಳು ಸೇರಿದಂತೆ ವಿದ್ಯುನ್ಮಾನ   ಕ್ಷೇತ್ರದಿಂದ ಹಿಡಿದು ಕ್ಷಿಪಣಿ ತಂತ್ರಜ್ಞಾನದವರೆಗೆ ಮಕ್ಕಳ ಗೊಂಬೆಗಳಿಂಧ ಹಿಡಿದು ಕಬ್ಬಿಣ ಸಿಮೆಂಟು, ಆಟೋ ಮೊಬೈಲುಗಳವರೆಗೆ ಅಕ್ಕಿ, ಗೋದಿ, ಮೊದಲಾದ ಕೃಷಿ ಉತ್ಪನ್ನಗಳವರೆಗೆ ಚೀನ ಇಂದು ಜಗತ್ತಿನ ದೊ...