ಇತ್ತೀಚೆಗೆ ತಮ್ಮ ತೊಂಬತ್ತಕ್ಕೂ ಹೆಚ್ಚು ವರುಷಗಳ ತುಂಬು ಜೀವನವನ್ನು ಮುಗಿಸಿ ಹೋದ ಬಂಡಿಗಡಿಯ ಮಾಸ್ತಮಕ್ಕರಂತಹವರನ್ನು ( ಮ್ಯಾತಮ್ಮ ಎಂದೇ ಎಲ್ಲರಿಗೂ ಚಿರಪರಿಚಿತರಾಗಿದ್ದವರು, ಮಾಸ್ತಿಯಮ್ಮ ಎಂಬುದು ಮೂಲ ಹೆಸರು) ನೆನೆಯುವ 'ಅಮ್ಮನ ನೆನಪಿನಲ್ಲಿ' ಅಪರೂಪದಲ್ಲಿ ಅಪರೂಪವಾದ ಕಾರ್ಯಕ್ರಮ. ಇದನ್ನು ಅವರ ಮಕ್ಕಳು ಹಾಗೂ ಕುಟುಂಬದವರು ಅವರ ಕುಟುಂಬದ ಗೆಳೆಯರು, ಅವರ ಮಗ ವೃತ್ತಿಯಲ್ಲಿ ಶಿಕ್ಷಕರಾದ ಬಿ ಡಿ ನಾಗರಾಜ್ ರ ಗೆಳೆಯರು ಸೇರಿ ಇಂದು ಅಂದರೆ ಫೆಬ್ರವರಿ ಹದಿನಾರರಂದು ಆಯೋಜಿಸಿದ ಕಾರ್ಯಕ್ರಮವಿದು. ಈ ಕಾರ್ಯಕ್ರಮದಲ್ಲಿ ಊರಿನ ಪ್ರಮುಖರು, ವೈಚಾರಿಕ ಬಳಗದವರು, ಸಾಹಿತ್ಯಾಸಕ್ತರು, ಅಮ್ಮ ಎಂಬ ವ್ಯಕ್ತಿತ್ವದ ಪ್ರಾಮುಖ್ಯತೆಗಳ ಬಗ್ಗೆ, ಭಾವನಾತ್ಮಕತೆಯ ಬಗ್ಗೆ ತಮ್ಮ ಮಾತುಗಳನ್ನು ಆಡಿದರು, ಜೊತೆಗೆ ಜನಮುಖಿ, ಜನಪದ ಹಾಗು ತತ್ವಪದಗಳ ಹಾಡುಗಾರರಾದ ನಾದ ಮಣಿನಾಲ್ಕೂರರ ಹಾಡುಗಾರಿಕೆ, ಮಕ್ಕಳ ಹಾಡುಗಳು ಗೆಳೆಯರ ಅನಿಸಿಕೆಗಳನ್ನು ಸಭೆಯ ಮುಂದಿಟ್ಟರು. ಜಾತಿಮತ ಪಂತಗಳನ್ನು ಮೀರಿ ನಡೆದ ಕಾರ್ಯಕ್ರಮವಿದು. ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಮಹತ್ವದ ಕಾರ್ಯಕ್ರಮ. ಇದರಲ್ಲಿ ಮಾಸ್ತಮಕ್ಕರ ಬಂದು ಬಳಗದವರು ಮಾತ್ರವಲ್ಲದೆ ಊರಿನ ಹಲವರು, ಮುಸ್ಲಿಮ್ ಸಮುದಾಯದವರು, ಕ್ರಿಶ್ಚಿಯನ್ ಸಮುದಾಯದವರು, ದಲಿತದಮನಿತ ಸಮುದಾಯದ ಹಲವಾರು ಜನರು ಇಲ್ಲಿ ಒಂದೆಡೆ ಅಂದರೆ ಮಾಸ್ತಮ್ಮಕ್ಕನ ಬ...