Skip to main content

Posts

Showing posts from August, 2024

ತಾಯಿಯೊಬ್ಬಳ ಕೋಳಿವ್ಯಾಪಾರ# mother#chicken trade#fate#

                                           ತಾಯಿಯೊಬ್ಬಳ ಕೋಳಿವ್ಯಾಪಾರ ಅಂದು ಮುಂಜಾನೆಯಿಂದ ಆ ತಾಯಿ ಬಹಳ ಕುಶಿಯಲ್ಲಿದ್ದಳು. ಆ ತಾಯಿ ಮದುವೆಯಾದ ಮೇಲೆ ಜೀವನದಲ್ಲಿ ಮೊದಲ ಬಾರಿ ಒಂದಷ್ಟು ಕಾಸು ಅಂದು ಸಂಪಾದಿಸಿದ್ದಳು. ಅದೊಂದು ಕಾಡಿನಿಂದಾವೃತವಾಗಿದ್ದ ಹಳ್ಳಿ. ಈ ತಾಯಿಯ ಮನೆಗೂ ಅಲ್ಲಿದ್ದ ಬೇರೊಂದು ಮನೆಗೂ ಸುಮಾರು ಅರ್ದ ಕಿಲೋಮೀಟರುಗಳ ದೂರವಿರಬಹುದೇನೋ. ಮತ್ತೆ ಮನೆ ನೋಡಬೇಕಾದರೆ ಮತ್ತೊಂದು ಕಿಲೋಮೀಟರಾದರೂ ಹೆಜ್ಜೆ ಹಾಕಬೇಕಿತ್ತು. ಆಗ ಹೆಜ್ಜೆಗಳೇ ಮುಖ್ಯವಾಗಿತ್ತು. ವಾಹನಗಳು ಆ ಹಳ್ಳಿ ಸುತ್ತಮುತ್ತ ಯಾರಬಳಿಯೂ ಇರಲಿಲ್ಲ. ಇದ್ದಿದ್ದು ಎತ್ತಿನಗಾಡಿ ಮಾತ್ರ. ಅದೂ ಕೂಡ ಗದ್ದೆ ತೋಟ ಹೀಗೆ ಒಂದಷ್ಟು ಅನುಕೂಲವಿದ್ದವರಲ್ಲಿ ಮಾತ್ರ. ಹತ್ತಾರು ಗಾಡಿ ಕಟ್ಟಿಕೊಂಡು ಸಾಲಾಗಿ ಮಣ್ಣು ಕಲ್ಲುಗಳ ರಸ್ತೆಯಲ್ಲಿ ಮದುವೆ ದಿಬ್ಬಣ ಹೊರಡುತ್ತಿದ್ದ ಕಾಲವದು. ಬಸ್ಸು ಲಾರಿ ಕಾರು ಮುಖ ನೋಡಬೇಕಾದರೆ ಮೂರು ನಾಲ್ಕು ಕಿಲೋಮೀಟರುಗಳಷ್ಟು ಹೆಜ್ಜೆ ಹಾಕಲೇಬೇಕಿತ್ತು. ಆಕೆ ದೂರದ ಊರಲ್ಲಿ ಬೆಳೆದು ಬಂದವಳು. ಮದುವೆಯಾದಾಗ ಈ ಹಳ್ಳಿಗೆ ಬಂದು ಇರಲೇಬೇಕಾದ ಅನಿವಾರ್ಯತೆ ಆಕೆಗೆ. ಆಕೆಯ ಗಂಡ ಹೊರಗೆ ಯಾವುದೋ ಖಾಸಗಿ ಕಂಪನಿಯಲ್ಲಿ ದುಡಿಯು...