‘ವಿಷವಟ್ಟಿ ಸುಡುವಲ್ಲಿ’#ರಾಷ್ಟ್ರೀಯ ಶಿಕ್ಷಣ ನೀತಿ# national educaion policy# vishavatti suduvalli book review
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಿಚ್ಚಿಡುವ ‘ವಿಷವಟ್ಟಿ ಸುಡುವಲ್ಲಿ’ ಲೇಖಕರು-ಬಿ ಶ್ರೀಪಾದ ಭಟ್ ಶಿಕ್ಷಣವು ಒಂದು ಸಮಾಜದ ನಾಗರಿಕ ಪ್ರಜ್ಞೆಯನ್ನು, ಬದುಕಿನ ಮಟ್ಟ, ಬದುಕಿನ ರೀತಿ, ದಿಕ್ಕು, ಗುರಿ ಹಾಗೂ ಸಾಮಾಜಿಕ ಕರ್ತವ್ಯಗಳನ್ನು ತೀರ್ಮಾನಿಸುವ ಬಹಳ ಮಹತ್ವದ ವಿಚಾರವಾಗಿದೆ. ಮಾನವ ಸಂಪನ್ಮೂಲವನ್ನು ಗುಣಾತ್ಮಕ, ಸೃಜನಶೀಲ ಹಾಗೂ ಕ್ರಿಯಾಶೀಲಗೊಳಿಸಲು ಇರುವ ಪ್ರಧಾನ ಸಾಧನವಾಗಿದೆ. ಶಿಕ್ಷಣವು ಸಮಾಜದ ಸಾಮೂಹಿಕ ಕೊಡುಗೆಯಾಗಿರುತ್ತದೆ. ಒಂದು ಸಮಾಜವು ಸಾಗಿಬಂದ ಪಯಣದ ಹಾದಿಯಲ್ಲಿ ಉತ್ಪಾದಿಸಿದ ವಸ್ತುಗಳು, ಅದಕ್ಕೆ ಹೊಂದಿಕೊಂಡಿರುವ ಚಟುವಟಿಕೆಗಳು ಮತ್ತು ಅದರಿಂದ ಉತ್ಪತ್ತಿಯಾದ ಎಲ್ಲಾ ರಂಗಗಳಲ್ಲಿನ ವೈಜ್ಞಾನಿಕ ಜ್ಞಾನಗುಚ್ಚಗಳನ್ನು ಕ್ರೋಢೀಕರಿಸಿ ಸಮಾಜದ ಎಲ್ಲಾ ನಾಗರಿಕರ ಪುರೋಗತಿ ಹಾಗೂ ಒಟ್ಟಾರೆ ಸಮಾಜದ ಮುಂಚಲನೆಗೆ ಅಡಿಪಾಯ ಹಾಗೂ ದಾರಿಯನ್ನಾಗಿ ಮಾಡಿಕೊಳ್ಳಬೇಕಿರುತ್ತದೆ. ಅಂತಹ ವೈಜ್ಞಾನಿಕ ಅಳವಡಿಕೆಗಳನ್ನು ಮಾಡುತ್ತಾ ಸಾಗುವ ಸಮಾಜವು ಮಹೋನ್ನತವಾಗಿ ಬೆಳೆಯುತ್ತಾ ಅಭೂತಪೂರ್ವ ಸಾಧನೆಗಳನ್ನು ಸಹಜವಾಗಿ ಮಾಡುತ್ತಾ ಸಾಗುತ್ತದೆ. ಅಲ್ಲಿ ಸಾವಿರ ಸಾವಿರ ಹೂವುಗಳರಳಿ ಸುಗಂಧ ಹಾಗೂ ಕಂಪು ಬೀರುತ್ತದೆ. ಅಲ್ಲಿ ಗಟ್ಟಿ ಫಲಗಳು ಬೆಳೆದು ಸಮಾಜವನ್ನುಎಲ್ಲಾ ರೀತಿಯಲ್ಲಿಯೂ ಶ್ರೀಮಂತಗೊಳಿಸುತ್ತಿರುತ್ತದೆ. ಆಳುತ್ತಿರುವ ವ್ಯವಸ್ಥೆಯೊಂದು ಎಷ್ಟು ಮಟ್ಟಿಗೆ ಪೌರರ ಶಿಕ್ಷಣಕ್ಕೆ ಗಮನ ಹಾಗೂ ಆದ್ಯತೆಯನ್...