Skip to main content

Posts

Showing posts from February, 2023

ಸಮಾಜಮುಖಿಗಳು ಜನಪರ ಬುದ್ದಿಜೀವಿಗಳು ಆರ್ಥಿಕ ಸಾಮಾಜಿಕ ರಾಜಕೀಯ ವಾಸ್ತವಗಳ ಕನ್ನಡಿಗಳಾಗಬೇಕು# electoral parties#intellectuals#pro peolpe activists# progressive organizations

 ಸಮಾಜಮುಖಿಗಳು ಜನಪರ ಬುದ್ದಿಜೀವಿಗಳು ಆರ್ಥಿಕ ಸಾಮಾಜಿಕ ರಾಜಕೀಯ ವಾಸ್ತವಗಳ ಕನ್ನಡಿಗಳಾಗಬೇಕು.  ಬದಲಿಗೆ ಚುನಾವಣೆಗಳಿಗಷ್ಟೇ ಸೀಮಿತರಾಗುವ ಶಕ್ತಿಗಳ  ಕುರುಡು ಸಮರ್ಥಕರಾಗುವುದು ಅಪಾಯಕರ.....                - ನಂದಕುಮಾರ್ ಕುಂಬ್ರಿ ಉಬ್ಬು                                             nandakumarnandana@gmail.com ನಮ್ಮ ದೇಶದ ಚುನಾವಣೆಗಳನ್ನು ಭಾರಿ ಕಾರ್ಪೋರೇಟು ಹಾಗೂ ಭಾರಿ ಆಸ್ತಿವಂತ ವರ್ಗ ನೇರವಾಗಿ ನಿರ್ವಹಣೆ ಮಾಡತೊಡಗಿರುವುದನ್ನು ಗಂಭೀರವಾಗಿ ಗಮನಿಸಬೇಕು. ೨೦೧೪ ರ ಚುನಾವಣೆ ಹಾಗೂ ನಂತರದ ಚುನಾವಣೆಗಳಲ್ಲಿ ನಿರ್ವಹಣೆ ಹೇಗೆಲ್ಲಾ ನಡೆಯುತ್ತವೆ ಎಂಬುದು ಎದ್ದುಕಾಣುತ್ತಿರುವ ವಿಚಾರ. ಪಕ್ಷಗಳನ್ನೂ, ಸಂಸದರನ್ನೂ, ಶಾಸಕರುಗಳನ್ನೂ ನೇರವಾಗಿಯೇ ಭಾರಿ ಕಾರ್ಪೋರೇಟು ಸಮೂಹವು ಖರೀದಿಸಿ ತಮ್ಮ ಪರವಾಗಿ ಸರ್ಕಾರಗಳನ್ನು ರಚಿಸಿ ನಡೆಸುತ್ತಿರೋದು ಎದ್ದುಕಾಣುತ್ತಿರುವ ವಿಚಾರವಲ್ಲವೇ. ಒಂದು ವೇಳೆ ಕೆಲವು ಕಾರಣಗಳಿಂದ ಭಿನ್ನಪಕ್ಷಗಳು ಅಲ್ಪಬಹುಮತ ಪಡೆದರೂ ಅವುಗಳು ತಮ್ಮ ಪರವಾಗಿ ಕಾರ್ಯನಿರ್ವಹಿಸಲಾಗದ ಸ್ಥಿತಿಯಲ್ಲಿದ್ದರೆ ಅದರ ಶಾಸಕರುಗಳನ್ನೇ ಖರೀದಿಸಿ ತಮ್ನ ಅನುಕ...

ಭಾರತ್ ಜೋಡೋ ಯಾತ್ರೆ ಜೋಡಿಸಿದ್ದೇನು? ಸಾಧಿಸಿದ್ದೇನು?#Bharath jodo yathre# Rahul Gandhi#congress#achievements

  ಭಾರತ್ ಜೋಡೋ ಯಾತ್ರೆ ಜೋಡಿಸಿದ್ದೇನು? ಸಾಧಿಸಿದ್ದೇನು?                                                          - ನಂದಕುಮಾರ್ ಕುಂಬ್ರಿಉಬ್ಬು.                                                                        ಮಿಂಚಂಚೆ:  nandakumarnandana67@gmail.com   ಭಾರತ್ ಜೋಡೋ ಯಾತ್ರೆ ಮುಗಿದಿದೆ.   ನಾಲ್ಕು ಸಾವಿರ ಕಿಲೋಮೀಟರುಗಳಿಗಿಂತಲೂ ಹೆಚ್ಚು ದೂರವನ್ನು ದೇಶದ 75 ಜಿಲ್ಲೆಗಳಲ್ಲಿ ಸಂಚರಿಸಿ ಕ್ರಮಿಸಲಾಗಿದೆ ಎಂದು ಹೇಳಲಾದ ಈ ಯಾತ್ರೆ ಕಳೆದ ತಿಂಗಳ 29ರಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ತ್ರಿವರ್ಣ ದ್ವಜ ಹಾರಿಸುವುದರೊಂದಿಗೆ ಕೊನೆಗೊಂಡಿತು. ಕನ್ಯಾಕುಮಾರಿಯಿಂದ ಪ್ರಾರಂಭಿಸಿದ ಯಾತ್ರೆ ಕೇರಳ ರಾಜ್ಯದ ಉದ್ದಕ್ಕೂ ಅ...