ವಚನ ಚಳವಳಿಯ ಬೀದರಿನ ನೆಲದ ಪ್ರಗತಿಪರ ಪ್ರಜಾತಾಂತ್ರಿಕ ಜೀವ ಶಿವರಾಜಕಾಡೋದೆ… ಒಂದು ನೆನಪು… ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಡೆಸಿ ನಿವೃತ್ತ ಜೀವನ ನಡೆಸುತ್ತಿದ್ದ 73 ವಯಸಿನ ಶಿವರಾಜ ಕಾಡೋದೆಯವರು ಇತ್ತೀಚೆಗೆ ಹೃದಯ ಸ್ತಂಭನಕ್ಕೊಳಗಾಗಿ ಭೌತಿಕವಾಗಿ ನಮ್ಮನ್ನು ಅಗಲಿದ್ದಾರೆ. ಇದಕ್ಕೂ ಕೆಲವು ದಿನಗಳ ಮೊದಲು ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು ಅದರಿಂದ ಗುಣಮುಖರಾಗಿ ಹೊರಬಂದಿದ್ದರು. ಅವರು ಚೇತರಿಸಿಕೊಂಡು ನಮ್ಮೆಲ್ಲರ ನಡುವೆ ಇನ್ನಷ್ಟು ಕಾಲ ಇರುತ್ತಾರೆ ಎಂದೇ ಎಲ್ಲರೂ ಬಾವಿಸಿದ್ದರು. ಆದರೆ ಅದು ಆಗದೇ ಹೋಗಿದ್ದು ಬಹಳ ವಿಷಾಧದ ಸಂಗತಿ. ಶಿವರಾಜ್ ಕಾಡೋದೆ ಭೂಮಾಲಿಕ ವ್ಯವಸ್ಥೆ ಹೇರಿರುವ ಬಿಟ್ಟಿಚಾಕರಿಗಳು, ಜೀತಗಾರಿಕೆ, ಬ...