Skip to main content

Posts

Showing posts from November, 2020

ಬೊಲಿವಿಯಾದಲ್ಲಿನ ಬೆಳವಣಿಗೆ#bolivia developments#lessons

  ಬೊಲಿವಿಯಾದಲ್ಲಿನ ಬೆಳವಣಿಗೆ…  ಗ್ರಹಿಸಬೇಕಾದ ಪಾಠಗಳು…   ಲ್ಯಾಟಿನ್ ಅಮೇರಿಕಾದ ರಾಷ್ಟ್ರ, ಚೆಗುವಾರರ ಕೊನೆಗಾಲದ ಕರ್ಮಭೂಮಿ ಬೊಲಿವಿಯಾ ಇದೇ ನವಂಬರ್ ಆರರಂದು ಮತ್ತೊಂದು ಸುದ್ದಿಗೆ ಕಾರಣವಾಗಿತ್ತು. ಅಲ್ಲಿನ ಇತ್ತೀಚೆಗೆ ಚುನಾಯಿತರಾದ ಅಧ್ಯಕ್ಷರ ಮೇಲೆಯೇ ಬಾಂಬ್ ಧಾಳಿ ನಡೆದಿತ್ತು. ಅಧ್ಯಕ್ಷರಾಗಿ ಚುನಾಯಿತರಾಗಿರುವ ಲೂಯಿಸ್ ಆರ್ಸ್ (Luis Arce) ತಮ್ಮ ಪಕ್ಷವಾದ ಮೂವ್ ಮೆಂಟ್ ಫಾರ್ ಸೋಷಿಯಲಿಸಂ (MAS) ನ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಎರಡು ದಿನಗಳಿರುವಾಗ ನಡೆದ ಈ ಘಟನೆಯಲ್ಲಿ ಯಾರಿಗೂ ಗಂಭೀರ ಅಪಾಯವೇನೂ ಸಂಭವಿಸಲಿಲ್ಲ. ಸುಮಾರು ಹನ್ನೊಂದುವರೆ ದಶಲಕ್ಷ ಜನಸಂಖ್ಯೆಯಿರುವ ಬೊಲಿವಿಯಾದಲ್ಲಿ ಕಳೆದ ವರ್ಷ ಚುನಾವಣೆ ನಡೆದು ಇವೋ ಮೊರೆಲ್ಸ್ ಭಾರಿ ಬಹುಮತದಿಂದ ಅಧ್ಯಕ್ಷರಾಗಿ ಪುನರಾಯ್ಕೆ ಆಗಿದ್ದರು. ಆದರೆ ಅಮೇರಿಕ ಮೊದಲಾದ ಸಾಮ್ರಾಜ್ಯಶಾಹಿ ಶಕ್ತಿಗಳು ಮತ್ತವರ ಏಜೆಂಟರುಗಳ ಮಸಲತ್ತಿನಿಂದಾಗಿ, ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ, ಮೊರೆಲ್ಸ್ ಪುನರಾಯ್ಕೆ ಸಿಂಧುವಲ್ಲ ಎಂದೆಲ್ಲಾ ಹುಯಿಲೆಬ್ಬಿಸಿ ರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿ ಮಾಡಲಾಗಿತ್ತು. ಇದರಲ್ಲಿ ‘ಆರ್ಗನೈಸೇಷನ್ ಫಾರ್ ಅಮೇರಿಕನ್ ಸ್ಟೇಟ್ಸ್’ ಎಂಬ ಸಂಘಟನೆಯು ಒಂದು ಮುಖ್ಯ  ಪಾತ್ರ ವಹಿಸಿತು. ಇದು ಮೊರೆಲ್ಸ್ ರನ್ನು ಬೆಂಬಲಿಸಿದ ಚುನಾವಣೆಯ ಪಲಿತಾಂಶವನ್ನು ಹುಸಿಯಾದುದ...

ಬಿಹಾರ ಫಲಿತಾಂಶ2020…ಪ್ರಜಾಪ್ರಭುತ್ವದ ಸೌಂದರ್ಯವೇ#bihar#election2020#democracy#constitution

  ಬಿಹಾರ ಫಲಿತಾಂಶ … ಪ್ರಜಾಪ್ರಭುತ್ವದ ಸೌಂದರ್ಯವೇ … !? ಸಂವಿಧಾನಾತ್ಮಕವಾಗಿ ಜನಸಾಮಾನ್ಯರ ರಕ್ಷಣೆ ಸಾಧ್ಯವೇ … .!?   ಕಳೆದ ಲೋಕಸಭಾ ಚುನಾವಣೆಯ ನಂತರ ಭಾರಿ ಸುದ್ಧಿಗೆ ಎಡೆಯಾಗಿದ್ದ ಬಿಹಾರದ ವಿಧಾನ ಸಬಾ ಚುನಾವಣೆ ಮುಗಿದು ಪಲಿತಾಂಶ ಬಂದಾಯಿತು. ಹಾಗೆ ಬಂದಿರುವ ಫಲಿತಾಂಶವು ಟಿ ಆರ್ ಪಿ ಮಾಧ್ಯಮಗಳ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನೂ ಬಡಮೇಲು ಮಾಡಿದ್ದು ಸಧ್ಯದ ಸುದ್ಧಿಯಾಗಿದೆ. ಬಿಹಾರ ವಿಧಾನ ಸಬಾ ಚುನಾವಣೆಯನ್ನು ಕೇಂದ್ರದ ಮೋದಿ ಸರ್ಕಾರದ ಒರೆಗಲ್ಲಾಗಿಯೇ ಕಾಣಲಾಗಿತ್ತು. ಅದಕ್ಕೆ ಕಾರಣವೂ ಇತ್ತು ಬಿಡಿ. ಕೇಂದ್ರ ಸರ್ಕಾರ ನಡೆಸಿದ ಆರ್ಥಿಕ ರಾಜಕೀಯ ಹಾಗೂ ಆಡಳಿತಾತ್ಮಕ ಧಾಳಿಗಳಿಂದಾಗಿ ಸಂಕಷ್ಟಕ್ಕೊಳಗಾದವರಲ್ಲಿ ಬಿಹಾರ ರಾಜ್ಯದ ಬಡ ಜನಸಾಮಾನ್ಯರದು ಒಂದು ದೊಡ್ಡ ಪಾಲಿರುವುದು ಸುಳ್ಳೇನಲ್ಲವಲ್ಲ. ಅದರಲ್ಲೂ ಉದ್ಯೋಗ ಹಾಗೂ ವಲಸೆ ಕಾರ್ಮಿಕರ ವಿಚಾರದಲ್ಲಿ ಮಾಡಿದ ಅನಾಹುತಗಳನ್ನು ಜನರು ಸುಲಭದಲ್ಲಿ ಮರೆಯಲಾರರು. ಅದು ಖಂಡಿತಾ ಮೋದಿ ಯ ಬಿ ಜೆ ಪಿಯನ್ನು ಈ ಚುನಾವಣೆಯಲ್ಲಿ ಭಾಧಿಸಲಿದೆ ಎನ್ನುವುದು ಸಾಮಾನ್ಯ ಲೆಕ್ಕಾಚಾರವಾಗಿತ್ತು. ಬಿಜೆಪಿಯ ಅಂಗವಾಗಿರುವುದರಿಂದಾಗಿ ನಿತೀಶ್ ಕುಮಾರ್ ಸರ್ಕಾರಕ್ಕೂ ಇವೆಲ್ಲಾ ಕಂಟಕವಾಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರವೂ ಇತ್ತಲ್ಲ. ಲಾಲು ಪ್ರಸಾದ್ ಯಾದವ್ ರ ಆರ್ ಜೆ ಡಿ ಹಾಗೂ ಎಡ ಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷ ಒಗ್ಗೂಡಿ ಮಹಾಘಟಬಂಧನ್ ಅಂತ ಮಾಡಿಕೊಂಡು ಉದ್ಯೋಗಾವಕಾಶ, ಕೇಂದ್ರದ ಮೋದಿ...

ಕನ್ನಡ ರಾಜ್ಯೋತ್ಸವದ ಸುತ್ತ ಮುತ್ತ# kannada rajyotsava#language#culture#nationality

  ಕನ್ನಡ ರಾಜ್ಯೋತ್ಸವದ ಸುತ್ತ ಮುತ್ತ ಅತೀ ಗಂಭೀರ ಪ್ರಶ್ನೆಗಳು?!! ನವೆಂಬರ್ ತಿಂಗಳು ಆರಂಭವಾಗುತ್ತಿದೆ. ಸಹಜವಾಗಿ ಕನ್ನಡ ಪ್ರದೇಶಗಳೆಂದು ಗುರ್ತಿಸಲ್ಪಡುವ ಭಾಗಗಳನ್ನು ಒಗ್ಗೂಡಿಸಿ ರಚನೆಯಾದ ಕರ್ನಾಟಕ ರಾಜ್ಯದ ಉದಯದ ದಿನವಾದ ನವೆಂಬರ್ ಒಂದರಿಂದಲೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ರಾಜ್ಯದಾದ್ಯಂತ ನಡೆಯುತ್ತವೆ. ಈ ಬಾರಿ ಕೋರೋನಾ ಲಾಕ್ ಡೌನ್ ಹೇರಿದ್ದು ಹಾಗೂ ನೆರೆ ಪ್ರವಾಹಗಳ ಹಾವಳಿ ಇನ್ನಿತರ ಕಾರಣಗಳಿಂದಾಗಿ ಜನಸಾಮಾನ್ಯರನ್ನು ಭಾರಿ ಸಂಕಷ್ಟದಲ್ಲಿ ಸಿಲುಕಿಸಲಾಗಿದೆ. ಇದರ ಮಧ್ಯೆಯೂ ಸರಕಾರಿ ಪ್ರಾಯೋಜಿತ ಕನ್ನಡ ರಾಜ್ಯೋತ್ಸವ ನಡೆಯುತ್ತವೆ. ಈ ಸಂಧರ್ಭದಲ್ಲಿ ಕನ್ನಡ ನಾಡಿನ ಜನಸಾಮಾನ್ಯರು ಹಲವು ಪ್ರಮುಖ ವಿಚಾರಗಳ ಕುರಿತು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ನಮ್ಮ ರಾಜ್ಯದ ಸಾಂವಿಧಾನಿಕ ಹಕ್ಕು ಹಾಗೂ ಸ್ವಾಯತ್ತತೆಗಳ ಇಂದಿನ ಪರಿಸ್ಥಿತಿಗಳು ಬಹಳ ಹದಗೆಟ್ಟಿರುವುದು ಸಾಕಷ್ಟು ಜನರಿಗೆ ತಿಳಿದಿರುವ ವಿಚಾರವೇ ಆಗಿದೆ.  ಕನ್ನಡಿಗರ ಬದುಕು, ಕನ್ನಡ ನೆಲ ಜಲ, ಕನ್ನಡ ನಾಡು ನುಡಿ, ಸಂಸ್ಕೃತಿಗಳಿಗೆ ಈಗ ಭಾರಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣ ಮಾಡಿರುವುದನ್ನು ಗಮನಿಸಿದವರಿಗೆ ಅರ್ಥವಾಗುವ ವಿಚಾರ. ಕನ್ನಡ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯವನ್ನಾಗಿ ಪರಿಗಣಿಸಲು ಬ್ರಿಟೀಷ್ ನೇರ ಆಡಳಿತದ ನಂತರವೂ ಕೂಡ ಜನಸಾಮಾನ್ಯರು ಅಪಾರವಾದ ತ್ಯಾಗ ಬಲಿದಾನಗಳನ್ನು ಮಾಡಬೇಕಾಗಿ ಬಂದ ವಿಚಾರವನ್ನು ಮರೆಯುವಂತಿಲ್ಲ. ಅದೊಂದು ‘ಸ್ವತಂತ್ರ್ಯ’ ಇಂಡಿಯಾದ ವ...

ಕಲ್ಯಾಣಸ್ವಾಮಿಯ ಸಶಸ್ತ್ರ ಬಂಡಾಯ (1837)#ರೈತಾಪಿ ಬಂಡಾಯಗಳು-ಕೊನೆಯ ಕಂತು #kalyanaswamy rebellion#making history 2

    ಕಲ್ಯಾಣಸ್ವಾಮಿಯ ಸಶಸ್ತ್ರ ಬಂಡಾಯ ( 1837) ರೈತಾಪಿ ಬಂಡಾಯಗಳು-ಕೊನೆಯ ಕಂತು     ಆಂಗ್ಲ ಮೂಲ: ಮೇಕಿಂಗ್ ಹಿಸ್ಟರಿ -ಸಂಪುಟ 2 ಕರ್ನಾಟಕಾಸ್ ಪೀಪಲ್ ಆಂಡ್ ದೆಯರ್ ಪಾಸ್ಟ್ -ಸಾಕಿ ಕನ್ನಡ ರೂಪಾಂತರ- ಡಾ ಆಶೋಕ್ ಕೆ ಆರ್. -ನಂದಕುಮಾರ್ ಕೆ ಎನ್ ಕುಂಬ್ರಿ ಉಬ್ಬು ಕಲ್ಯಾಣಸ್ವಾಮಿ ಮತ್ತು ಕೇದಂಬಾಡಿ ರಾಮ ಗೌಡ ಮುನ್ನಡೆಸಿದ ಹೋರಾಟವು 1837 ರಲ್ಲಿ ಭುಗಿಲೆದ್ದಿತಾದರೂ , ಈ ಹೋರಾಟಕ್ಕೆ ಮುನ್ನುಡಿ ಬರೆದ ಘಟನೆಗಳನ್ನು 1834 ರಲ್ಲೇ ಬ್ರಿಟೀಷರು ವೀರರಾಜೇಂದ್ರನನ್ನು ಕೊಡಗಿನಿಂದ ನಿವೃತ್ತಿಯಾಗುವಂತೆ ಮಾಡಿ ಅಲ್ಲಿನ ಆಡಳಿತವನ್ನು ನೇರವಾಗಿ ತನ್ನ ಕೈಗೇ ತೆಗೆದುಕೊಂಡ ದಿನದಿಂದಲೇ ಕಾಣಬಹುದು. ಅ. ಆರ್ಥಿಕ ಕಾರಣಗಳು ಬ್ರಿಟೀಷರಿಗೆ ವಾಣಿಜ್ಯ ಕೃಷಿಯೆಡೆಗಿದ್ದ ಆಕರ್ಷಣೆಯು , ದಕ್ಷಿಣ ಕನ್ನಡದ ಪುತ್ತೂರು ಸುಳ್ಯ ಪ್ರದೇಶದಲ್ಲಿ-ಈ ಪ್ರದೇಶ 1804 ರಿಂದ 1834 ರವರೆಗೆ ಕೊಡಗಿಗೆ ಸೇರಿತ್ತು- ಭೂ ಕಂದಾಯ ಕಟ್ಟಿಸಿಕೊಳ್ಳುವ ವಿಧಾನವನ್ನು ಹಣದ ವ್ಯವಹಾರವನ್ನಾಗಿಸಿತು , ಈ ಮೊದಲು ಇಲ್ಲಿ ಭೂ ಕಂದಾಯವೆಂಬುದು ವಸ್ತುಗಳ ಬದಲಾವಣೆಯಾಗಿತ್ತು. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಮತ್ತು ದಟ್ಟ ಕಾಡುಗಳಿಂದ ಆವೃತವಾದ ಪುತ್ತೂರು - ಸುಳ್ಯ ಪ್ರದೇಶದಲ್ಲಿ ಸರಕು ಉತ್ಪಾದನೆ ಕನಿಷ್ಟ ಮಟ್ಟದಲ್ಲಿರುತ್ತಿತ್ತು. ಶ್ಯಾಮ್ ಭಟ್ ಹೇಳುವಂತೆ: “ ಕೊಡಗಿನ ರಾಜರ ಆಳ್ವಿಕೆಯಲ್ಲಿ , ಕಂದಾಯವನ್ನು ವಸ್ತುವಿನ ರೂಪದಲ್ಲಿ ಕೊಡಲಾಗುತ್ತಿತ್ತು. ...