Skip to main content

Posts

Showing posts from March, 2025

ಕೊರಗರು#ಮಾತೃ ಸಮುದಾಯ#koragaru#matrilenial#community#dalith

  'ಕೊರಗರು ತುಳುನಾಡಿನ ಮಾತೃ ಸಮುದಾಯ' ಎಂ ಬ ದಲಿತ ಕಾಳಜಿಯ ಮಹತ್ವದ  ಕೃತಿ      ಪತ್ರಕರ್ತ ಹಾಗೂ ಜನಪರ ಕಾರ್ಯಕರ್ತ ನವೀನ್ ‌ ಸೂರಿಂಜೆ ಕೊರಗರ ಕುರಿತಾದ ಒಂದು ಅವಶ್ಯಕವಾದ   ಕೃತಿಯನ್ನು ಬ ರೆ ದಿದ್ದಾರೆ . ಇದನ್ನು ಕ್ರಿಯಾ ಪ್ರಕಾಶನ ಮುದ್ರಿಸಿ ಬಿಡುಗಡೆಗೊಳಿಸಿದ್ದಾರೆ . ಇದು ಕೊರಗ ಸಮುದಾಯದ ಹೃದಯ ವಿದ್ರಾವಕ ಬದುಕಿನ ಒಂದು ಚಿತ್ರಣವನ್ನು ಓದುಗರಿಗೆ ನೀಡುತ್ತದೆ . ನಾಗರಿಕವೆಂದು ಹೇಳಿಕೊಳ್ಳುತಿರುವ   ಸಮಾಜ ಹಾಗೂ ಅದರ ಸರಕಾರಗಳು ಒಂ ದು ದುಡಿಮೆಗಾರ ಸಮುದಾಯವನ್ನು ಇಷ್ಟೊಂದು ಕಿರಾತಕವಾಗಿ ನಡೆಸಿಕೊಳ್ಳು ತ್ತಾ ಅಳಿವಿನಂಚಿಗೆ ದೂಡುತ್ತಾ ಬಂದಿದೆ ಎಂಬ ಕಠೋರ ಸತ್ಯವನ್ನು ಸ್ಪಷ್ಟವಾಗಿ ಮುಖಕ್ಕೆ ರಾಚುವಂತೆ ತೆರೆದಿಡುವ ಕೃತಿಯಿದು . ಇದು ಕಾಲ್ಪನಿಕ ಕೃತಿಯಲ್ಲ ಎನ್ನುವುದನ್ನು ಸ್ಪಷ್ಟವಾದ ಗ್ರಹಿಕೆಯೊಂದಿಗೆ ಓದಿಕೊಳ್ಳಬೇಕು . ಎಲ್ಲವನ್ನು ಆಧಾರಸಹಿತವಾಗಿ ವಿವರಿಸಿರುವ ಕೃತಿಯಿ ದು ಕೊರಗ ಸಮುದಾಯವನ್ನು ಹತ್ತಿರದಿಂದ ಕಂಡು ಸಾಕಷ್ಟು ಅದ್ಯಯನ ನಡೆಸಿ ಈ ಕೃತಿಯನ್ನು ನವೀನ್‌ ಸೂರಿಂಜೆ ರಚಿಸಿದ್ದಾರೆ. ೧೦೮ ಪುಟಗಳ ಈ ಕೃತಿಯನ್ನು ನಾವುಗಳು ನಮ್ಮ ಮನುಷ್ಯತ್ವ ಉಳಿಸಿಕೊಳ್ಳಲು ಓದಿ ಗ್ರಹಿಸಬೇಕಾದ ಅಗತ್ಯವಿದೆ.   ಒಟ್ಟು ಹದಿಮೂರು ಅದ್ಯಾಯಗಳಿಂದ ಈ ಕೃತಿಯಲ್ಲಿ ಕೊರಗ ಸಮುದಾಯದ ಬಗ್ಗೆ , ಅವರನ್ನು ಈ ನಾಗರಿಕವೆಂದು ಹೇಳ...

ಸಭೆಯ ನಿರಾಕರಣೆಯ ಅಭಿವ್ಯಕ್ತಿಯ ದಮನ# ಸಂವಿಧಾನಾತ್ಮಕ ಫ್ಯಾಸಿಸಂ# curtailing democratic space of holding meetings# constitutional aristocracy

 ಪ್ಯಾಲೆಸ್ತೇನಿನ ಜನರ ಪರವಾಗಿ ಸಭೆಗಳನ್ನು ಪ್ರತಿಭಟನೆಗಳನ್ನು ಕರ್ನಾಟಕದಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ನಡೆಯಲು ಬಿಡದೇ ಜಲವಾರು ಅಡ್ಡಿಗಳನ್ನು ಮಾಡಿದ್ದರು. ಹಿಂದೆ ದಾನಮ್ಮ ಪ್ರಕರಣದಲ್ಲಿ ತಮ್ಮ ಅನುಕೂಲದ ಬಂದ್ ಗಳು ಪ್ರತಿಭಟನೆಗಳನ್ನು ಬೆಂಬಲಿಸಿದ್ದಲ್ಲದೇ ಅದನ್ನು ತಮ್ಮ ಪರವಾಗಿ ಓಟುಬ್ಯಾಂಕ್ ಮಾಡಿಕೊಳ್ಳಲು ಬಹಳ ಚೆನ್ನಾಗಿ ಇದೇ ಸರ್ಕಾರ ಬಳಸಿಕೊಂಡಿತು. ತಾವೇ ಬಂದ್ ಗಳು ನಡೆಯುವಂತೆ ನೋಡಿಕೊಂಡರು. ಆದರೆ ವಿಜಾಪುರ ಚಲೋ ಕಾರ್ಯಕ್ರಮವನ್ನು ಹಲವು ವಿಧಗಳಲ್ಲಿ ದಮನಿಸಿದ್ದಲ್ಲದೆ ಅದನ್ನು ಆಯೋಜಿಸಿದವರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಲ್ಲದೇ ಹಲ್ಲೆಗಳನ್ನು ಸಂಘಟಿಸಲಾಯಿತು. ಹಲವರನ್ನು ಬಂಧಿಸಿ ಕಾರಾಗೃಹದಲ್ಲಿಡಲಾಯಿತು.. ಈ ಚಲೋ ಕಾರ್ಯಕ್ರಮ ನಾವೇ ಆಯೋಜಿಸಿದ್ದು ಎಂಬಂತೆಲ್ಲಾ ಭಾರಿ ಫೋಸು ಕೊಟ್ಟ ಕೆಲವರು ನಂತರ ಅದನ್ನು ನಾವಲ್ಲಾ ಆಯೋಜಿಸಿದ್ದು ನಾವು ಅದರ ಸಲಹೆಗಾರರು ಮಾತ್ರ..... ಎಂದು ಹೇಳುವುದಕ್ಕಾಗಿಯೇ ಪತ್ರಿಕಾ ಗೋಷ್ಟಿ ಮಾಡಿದರು. ಆದರೆ ಸರಕಾರದ ದಮನಕಾರಿ ನಡೆಗಳ ಬಗ್ಗೆಯಾಗಲೀ, ಹಲ್ಲೆ ಬಂಧನಗಳ ಬಗ್ಗೆ ಕನಿಷ್ಟ ಸೊಲ್ಲು ಎತ್ತಿರಲಿಲ್ಲ. ಅದು ಬೇರೊಂದು ವಿಚಾರ. ದಾನಮ್ಮ ಪ್ರಕರಣ ಅಲ್ಲಿಗೆ ಸ್ತಭ್ದಗೊಳಿಸಲಾಯಿತು.. ಸೌಜನ್ಯ ಮತ್ತಿತರರ ಅತ್ಯಾಚಾರ, ಕಗ್ಗೊಲೆ, ಅಸಹಜ ಸಾವುಗಳ ಕುರಿತು ವಿವರಣೆಯುಳ್ಳ ವೀಡಿಯೋ ಮಾಡಿದ್ದಕ್ಕಾಗಿಯೇ ಸಮೀರ್ ಎಂಬ ಯೂಟ್ಯೂಬರ್ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿಡುವ ಮಟ್ಟಕ್ಕೂ ಈ ಸರ್ಕಾರ ಹೊಗಿತ್ತು. ಕೊ...