ಮಣಿಪುರದ ಇಂದಿನ ಪರಿಸ್ಥಿತಿಯ ಹಿಂದಿನ ಮುಖ್ಯ ಕಾರಣಗಳು - ನಂದಕುಮಾರ್ ಕುಂಬ್ರಿಉಬ್ಬು ಮಿಂಚಂಚೆ: nandakumarnandana67@gmail.com ಒಂದು ಕಾಲದಲ್ಲಿ ಕಾಂಗ್ಲೆಪಾಕ್ ಎಂಬ ಸ್ವತಂತ್ರ ಸಾಮ್ರಾಜ್ಯವಾಗಿದ್ದ ಇಂದಿನ ಮಣಿಪುರದ ಘಟನಾವಳಿಗಳು ಇತ್ತೀಚೆಗೆ ಮತ್ತೊಮ್ಮೆ ಇಡೀ ಜಗತ್ತಿನ ಗಮನವನ್ನು ದೊಡ್ಡಮಟ್ಟದಲ್ಲಿ ಸೆಳೆದಿವೆ. ಮಣಿಪುರ ರಾಜ್ಯದ ಪರಿಸ್ಥಿತಿಗೆ ಕಾರಣಗಳನ್ನು ಬಹಳ ಹಿಂದಿನಿಂದ ಮುಂದುವರೆಸಿಕೊಂಡು ಬರಲಾಗಿದೆ. ಮೂವತ್ತಕ್ಕೂ ಹೆಚ್ಚಿನ ಬುಡಕಟ್ಟು ಜನಸಮುದಾಯಗಳಿರುವ ಪ್ರದೇಶ ಈಗಿನ ಮಣಿಪುರ ರಾಜ್ಯ. 1824-1826 ವರೆಗಿನ ಬ್ರಿಟಿಷ್ ಬರ್ಮಾ ಯುದ್ದದಲ್ಲಿ ಈಗಿನ ಇಂಡಿಯಾದ ಈಶಾನ...