ಕನ್ನಡ ರಾಜ್ಯೋತ್ಸವದ ಸುತ್ತ ಮುತ್ತ ಅತೀ ಗಂಭೀರ ಪ್ರಶ್ನೆಗಳು ?!! - ನಂದಕುಮಾರ್ ಕೆ . ಎನ್ ಕುಂಬ್ರಿ ಉಬ್ಬು ಮಿಂಚಂಚೆ : nandakumarnandana67@gmail.com ನವೆಂಬರ್ ತಿಂಗಳು ಆರಂಭವಾಗುತ್ತಿದೆ . ಸಹಜವಾಗಿ ಕನ್ನಡ ಪ್ರದೇಶಗಳೆಂದು ಗುರ್ತಿಸಲ್ಪಡುವ ಭಾಗಗಳನ್ನು ಒಗ್ಗೂಡಿಸಿ ರಚನೆಯಾದ ಕರ್ನಾಟಕ ರಾಜ್ಯದ ಉದಯದ ದಿನವಾದ ನವೆಂಬರ್ ಒಂದರಿಂದಲೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ರಾಜ್ಯದಾದ್ಯಂತ ನಡೆಯುತ್ತವೆ .. ಈ ಸಂದರ್ಭದಲ್ಲಿ ಕನ್ನಡ ನಾಡಿನ ಜನಸಾಮಾನ್ಯರು ಹಲವು ಪ್ರಮುಖ ವಿಚಾರಗಳ ಕುರಿತು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ . ನಮ್ಮ ರಾಜ್ಯದ ಸಾಂವಿಧಾನಿಕ ಹಕ್ಕು ಹಾಗೂ ಸ್ವಾಯತ್ತತೆಗಳ ಇಂದಿನ ಪರಿಸ್ಥಿತಿಗಳು ಬಹಳ ಹದಗೆಟ್ಟಿರುವುದು ಸಾಕಷ್ಟು ಜನರಿಗೆ ತಿಳಿದಿರುವ ವಿಚಾರವೇ ಆಗಿದೆ . ಕನ್ನಡಿಗರ ಬದುಕು , ಕನ್ನಡ ನೆಲ ಜಲ , ಕನ್ನಡ ನಾಡು ನುಡಿ , ಸಂಸ್ಕೃತಿಗಳಿಗೆ ಈಗ ಭಾರಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣ ಮಾಡಿರುವುದನ್ನು ಗಮನಿಸಿದವರಿಗೆ ಅರ್ಥವಾಗುವ ವಿಚಾರ . ಕನ್ನಡ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯವನ್ನಾಗಿ ಪರಿಗಣಿಸಲು ಬ್ರಿಟೀಷ್ ನೇರ ಆಡಳಿತ ಕೊನೆಗೊಂಡ ನಂತರವೂ ಕೂಡ ಜನಸಾಮಾನ್ಯರು ಅಪಾರವಾದ ತ್ಯಾಗ ಬಲಿದಾನಗಳನ್ನು ಮಾಡಬೇಕಾಗಿ ಬಂದ ವಿಚಾರವನ್ನು ಮರೆಯುವಂತಿಲ್ಲ . ಅದೊಂದು ...