ರಷ್ಯಾ ಉಕ್ರೈನ್ ಯುದ್ಧ… ಜಾಗತಿಕ ಲೂಟಿಗಾಗಿನ ಸಾಮ್ರಾಜ್ಯಶಾಹಿಗಳ ಪೈಪೋಟಿಯ ಪರಿಣಾಮ.. - ನಂದಕುಮಾರ್ ಕೆ. ಎನ್. ಕುಂಬ್ರಿಉಬ್ಬು nandakumarnandana67@gmail.com ಬಹಳ ಕಾಲದಿಂದ ಗರಿಗಟ್ಟಿಸುತ್ತಾ ಬಂದ ಉಕ್ರೈನ್ ಮತ್ತು ರಷ್ಯಾ ಬಿಕ್ಕಟ್ಟು ಈಗ ಯುದ್ಧದ ಹಂತಕ್ಕೆ ತಲುಪಿಸಲಾಗಿದೆ. ಗೊರ್ಬಚೇವ್ ಕಾಲದ ಬಂಡವಾಳಶಾಹಿ ನಡೆಗಳ ಅಂತಿಮ ಪರಿಣಾಮವಾಗಿ ಸೋವಿಯತ್ ಗಣರಾಜ್ಯ ಪತನಗೊಂಡು ಅದರ ಭಾಗವಾಗಿದ್ದ ಹಲವು ಗಣರಾಜ್ಯಗಳು ಪ್ರತ್ಯೇಕ ರಾಷ್ಟ್ರಗಳಾಗಿ ಸ್ವಾತಂತ್ರ್ಯಗೊಂಡವು. ಹಿಂದಿನ ಸಮಾಜವಾದಿ ಸೋವಿಯತ್ ಒಕ್ಕೂಟದ ಭಾಗವಾಗಿದ್ದಾಗಿನಿಂದಲೂ ಆಯಾ ಗಣರಾಜ್ಯಗಳು ಪ್ರತ್ಯೇಕ ಸಂಸತ್ತು, ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಸರ್ಕಾರಗಳನ್ನು ಹೊಂದಿದ್ದವಲ್ಲದೇ ಬಯಸಿದಲ್ಲಿ ಪ್ರತ್ಯೇಕಗೊಳ್ಳುವ ಹಕ್ಕು ಸೇರಿದಂತೆ ಸ್ವಯಂ ನಿರ್ಣಯದ ಹಕ್ಕನ್ನು ಮೊದಲಿನಿಂದಲೂ ಹೊಂದಿದ್ದವು. ಸೋವಿಯತ್ ಒಕ್ಕೂಟದ ಸರ್ಕಾರ ವಿದೇಶಾಂಗ ವ್ಯವಹಾರ, ರಕ್ಷಣೆಯಂತಹ ಎಲ್ಲಾ ಗಣರಾಜ್ಯಗಳ...