ರೈತಾಪಿ ಬಂಡಾಯಗಳು -3 ನೇ ಕಂತು ಆಂಗ್ಲ ಮೂಲ: ಮೇಕಿಂಗ್ ಹಿಸ್ಟರಿ -ಸಂಪುಟ 2 ಕರ್ನಾಟಕಾಸ್ ಪೀಪಲ್ ಆಂಡ್ ದೆಯರ್ ಪಾಸ್ಟ್ -ಸಾಕಿ ಕನ್ನಡ ರೂಪಾಂತರ- ಡಾ ಆಶೋಕ್ ಕೆ ಆರ್. -ನಂದಕುಮಾರ್ ಕೆ ಎನ್ ಕುಂಬ್ರಿ ಉಬ್ಬು v) ಗೆರಿಲ್ಲಾ ಸೈನ್ಯ ಗೆರಿಲ್ಲಾ ಸೈನ್ಯದಲ್ಲಿ ಎರಡು ಹಂತದ ರಚನೆಯಿತ್ತು. ಒಂದೆಡೆ ಸಾಮಾನ್ಯ ಪಡೆಗಳಿದ್ದವು , ಆ ಪಡೆಗೆ ನೇಮಕವಾಗುವ ಜನರ ಪ್ರಾಂತ್ಯವೂ ವಿಶಾಲವಾಗಿತ್ತು ಮತ್ತು ಈ ಪಡೆಗಳು ಹೆಚ್ಚು ಚಲನಶೀಲವಾಗಿದ್ದವು. ಇದರಲ್ಲಿ ನಗರ ಪ್ರದೇಶದ ಹೋರಾಟಗಾರರಿದ್ದರು ಮತ್ತು ಉತ್ತರ ಕನ್ನಡ , ಬಳ್ಳಾರಿ (ಉದಾಹರಣೆಗೆ , ಭಟ್ಟರಹಳ್ಳಿಯಂತಹ ಊರುಗಳು) , ಚಿತ್ರದುರ್ಗ ಮತ್ತು ಧಾರವಾಡದ ಪಡೆಗಳೂ ಉತ್ತಮ ಸಂಖೈಯಲ್ಲಿದ್ದವು. 135 ಜನಸೇನೆಯ (ಮಿಲಿಷಿಯಾ)ದ ಬಗ್ಗೆ ಬಿ.ಎಸ್.ರಾಮಭಟ್ಟ “ ಹಳ್ಳಿಗಳ ರಕ್ಷಣೆಗೋಸ್ಕರ ‘ ಗ್ರಾಮ ದಳಗಳನ್ನು ’ ರಚಿಸಲಾಗಿತ್ತು ” ಎಂಬ ಅಂಶವನ್ನು ನಮಗೆ ತಿಳಿಸುತ್ತಾರೆ. 136 ಮೇಕಿಂಗ್ ಹಿಸ್ಟರಿಯ ಒಂದನೇ ಸಂಪುಟದಲ್ಲಿ ನಾವು ವಿವರಿಸಿರುವ ಕಂದಚಾರ ಜನಸೇನೆಯು ಈ “ ಗ್ರಾಮ ದಳಗಳ” ರಚನೆಗೆ ಮೂಲಾಧಾರ ಎಂಬುದರ ಬಗ್ಗೆ ಹೆಚ್ಚು ಅನುಮಾನಗಳಿಲ್ಲ. 137 ಗೆರಿಲ್ಲಾ ಸೈನ್ಯಕ್ಕೆ ಬ್ರಹ್ಮಗಿರಿ , ಉಳವಿ , ಚೆನ್ನಗಿರಿ , ಚಂದ್ರಗುತ್ತಿ , ಸೊನಾಲೆ ಮತ್ತು ಸಾಸ್ವೇಹಳ್ಳಿಯಲ್ಲಿ ರಹಸ್ಯ ತರಬೇತಿ ನೀಡಲಾಗಿತ್ತು. ಬಂದೂಕು , ಕತ್ತಿ , ಈಟಿ , ಭರ್ಜಿ , ಬಿಲ್...