ಒಡೆಯರ ಆಡಳಿತದಲ್ಲಿ ಮಹಿಳೆಯರ ಮೇಲಿನ ಪುರುಷಾಧಿಪತ್ಯದ ದಬ್ಬಾಳಿಕೆಯ ಹೆಚ್ಚಳ ಆಂಗ್ಲ ಮೂಲ: ಮೇಕಿಂಗ್ ಹಿಸ್ಟರಿ ಕರ್ನಾಟಕಾಸ್ ಪೀಪಲ್ ಆಂಡ್ ದೆಯರ್ ಪಾಸ್ಟ್ - ಸಂಪುಟ 2 -ಸಾಕಿ ಕನ್ನಡ ರೂಪಾಂತರ- ಡಾ ಆಶೋಕ್ ಕೆ ಆರ್. -ನಂದಕುಮಾರ್ ಕೆ ಎನ್ ಕುಂಬ್ರಿ ಉಬ್ಬು ಟಿಪ್ಪುವಿನ ನಿಯಮಗಳು ವೇಶ್ಯಾವಾಟಿಕೆ ಮತ್ತು ಮಹಿಳೆಯರ ಮಾರಾಟವನ್ನು ನಿಷೇಧಿಸಿತ್ತು. ಚಾಮುಂಡಿ ದೇವಸ್ಥಾನಕ್ಕೆ ನರಹತ್ಯೆಯ ನೆಪದಲ್ಲಿ ಕನ್ಯೆಯರ ಜೀವಹರಣವಾಗುವುದನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ಆತ ತೆಗೆದುಕೊಂಡಿದ್ದ ಎನ್ನುವ ವರದಿಗಳೂ ಇವೆ. 204 ವಸಾಹತುಶಾಹಿ ಮತ್ತವರ ಕೈಗೊಂಬೆ ಸರಕಾರ ಅಧಿಕಾರಕ್ಕೆ ಬರುವುದರೊಂದಿಗೆ ಇಂತಹ ಹೇಯ ಆಚರಣೆಗಳು ಮತ್ತೆ ಪ್ರಾರಂಭವಾದವು , ಮಹಿಳೆಯರಿಗೆ ವಿಪರೀತದ ಉಪದ್ರವ ಕೊಡುವ ಕಾಲವಾಯಿತು ಇದು. ಕೈಗೊಂಬೆ ಸರಕಾರ ಮಹಿಳೆಯರನ್ನು ಶೋಷಿಸಿದ ಬಗ್ಗೆ ಸೆಬಾಸ್ಟಿಯನ್ ಜೋಸೆಫ್ ಹೇಳುತ್ತಾರೆ: “ಮಹಿಳೆಯರ ಸ್ಥಾನಮಾನ ತುಂಬ ಚರ್ಚೆಗೆ ಒಳಗಾಗಿದೆ , ಆದರೆ , ಕರ್ನಾಟಕದ ಇತಿಹಾಸದ ಶೋಧದಲ್ಲಿ ತುಂಬ ಕಡಿಮೆ ಸ್ಥಳವನ್ನು ಪಡೆದಿದೆ. ಪರೋಕ್ಷವಾಗಿಯಾದರೂ ಈ ವಿಷಯದ ಬಗ್ಗೆ ಮಾತನಾಡಿರುವ ಪ್ರತಿಯೊಬ್ಬ ವಿದ್ವಾಂಸರೂ ನವಯುಗ ಪೂರ್ವ...