ಆಧುನಿಕ ರಾಜ್ಯ, ಇಸ್ಲಾಂ ಮತ್ತು ಜಾತಿಯ ನಿರಾಕರಣೆ. --- ಆಂಗ್ಲ ಮೂಲ, ಮೇಕಿಂಗ್ ಹಿಸ್ಟರಿ ಕರ್ನಾಟಕಾಸ್ ಪೀಪಲ್ ಅಂಡ್ ದೆಯರ್ ಪಾಸ್ಟ್ -ಸಾಕಿ ಕನ್ನಡ ರೂಪಾಂತರ - ಡಾ. ಅಶೋಕ್ ಕೆ. ಆರ್. -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು ಹೈದರಾಲಿ ಮತ್ತು ಟಿಪ್ಪುಸುಲ್ತಾನ ರ ಆಳ್ವಿಕೆಯಲ್ಲಿ ಆಧುನಿಕ ಪ್ರಭುತ್ವದ ಬೆಳವಣಿಗೆ ಉಂಟುಮಾಡಿದ ಪರಿಣಾಮ , ಈ ಇಬ್ಬರೂ ರಾಜರು ಜಾರಿಗೆ ತಂದ ಸುಧಾರಣೆ ಮತ್ತು ಇಸ್ಲಾಮಿನ ಪ್ರಭಾವವು ಜಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಇನ್ನಿತರೆ ಅಂಶಗಳಾದವು. ಮೈಸೂರು ಸೈನ್ಯ ಮತ್ತು ಜನಪಡೆಯಲ್ಲಿ (ಮಿಲಿಷಿಯಾ) ಮುಖ್ಯವಾಗಿ ಬೇಡ , ಕುರುಬ , ಈಡಿಗ , ಒಕ್ಕಲಿಗ ಮತ್ತು ಲಿಂಗಾಯತ ಜಾತಿಯ ಜನರಿದ್ದರು. ವಡ್ಡ , ಬೋವಿ ಮತ್ತು ಲಂಬಾಣಿಗಳು ಸೈನ್ಯದ...