Skip to main content

Posts

Showing posts from February, 2020

ಬೀದಿಗಿಳಿದ ಜನಸಾಮಾನ್ಯರು - ಪರಿಹಾರವಾಗದ ರೈತರ# common people # agrarian crisis

ಬೀದಿಗಿಳಿದ ಜನಸಾಮಾನ್ಯರು ಪರಿಹಾರವಾಗದ ರೈತರ ಸಂಕಷ್ಟಗಳು! ಇಂಡಿಯಾದ ಬೀದಿಗಳು ಇಂದು ಮಹಿಳೆಯರ, ಅಲ್ಪಸಂಖ್ಯಾತರ, ವಿದ್ಯಾರ್ಥಿಗಳ, ಬುದ್ದಿಜೀವಿಗಳ ಹೋರಾಟಗಳು, ಘೋಷಣೆಗಳಿಂದ, ಭಿತ್ತಿಪತ್ರಗಳಿಂದ ತುಂಬಿಹೋಗಿದೆ. ನಗರ, ಜಿಲ್ಲಾ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಪ್ರತಿಭಟನೆಗಳು, ಸಮಾವೇಶಗಳು ನಡೆಯಲಾರಂಭಿಸಿವೆ. ಕಾಶ್ಮೀರ ಪಂಜಾಬ್, ಈಶಾನ್ಯದ ರಾಜ್ಯಗಳು, ದೆಹಲಿ, ಉತ್ತರಪ್ರದೇಶ, ಬಿಹಾರಗಳಿಂದ ಹಿಡಿದು ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಒಡಿಸ್ಸ ಪಶ್ಚಿಮಬಂಗಾಳ,   ಹೀಗೆ   ದೇಶದ ಎಲ್ಲೆಡೆಯೂ ಪೌರತ್ವ ಕಾಯಿದೆಗಳನ್ನು ವಿರೋಧಿಸಿ ಚಾರಿತ್ರಿಕ ರೀತಿಯ ಹೋರಾಟಗಳು ನಡೆಯುತ್ತಿವೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸರಕಾರ ಮತ್ತದರ ಪಡೆಗಳ ವ್ಯಾಪಕ   ಕಿರುಕುಳಗಳು, ದಮನಕಾಂಡಗಳು, ಹಿಂಸಾಚಾರಗಳು, ಕಗ್ಗೊಲೆಗಳ ನಡುವೆಯೂ ಈ ಹೋರಾಟ ನಿರಂತರತೆಯನ್ನು ಕಾಪಾಡುತ್ತಾ ವ್ಯಾಪಕಗೊಳ್ಳುತ್ತಾ ಹೋಗುತ್ತಿರುವುದು. ಇದು ಸ್ವಾತಂತ್ರ್ಯ ಹೋರಾಟ ನಂತರದ ದಶಕಗಳಲ್ಲೇ ವಿರಳವಾದ ಸಾಮಾಜಿಕ ವಿದ್ಯಮಾನವಾಗಿದೆ. ಹೊಸ ರೀತಿಯ ಹೋರಾಟ ರೂಪ ಶಾಹೀನ್ ಭಾಗ್ ಗಳು ದೇಶದ ಹಲವೆಡೆಗಳಲ್ಲಿ ಆರಂಭವಾಗುತ್ತಾ ಮುನ್ನೆಡೆಯುತ್ತಲಿವೆ. ಈ ಮಧ್ಯೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ, ರಾಷ್ಟ್ರದ್ರೋಹದ ಪ್ರಕರಣಗಳನ್ನಾಗಿ ಮಾಡುವ ಕಾರ್ಯಗಳು ನಡೆಯುತ್ತಲೇ ಇವೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಕವಿಗಳು,...

ಆಮ್ ಆದ್ಮಿ ಪಕ್ಷ ಕೋಮುವಾದ--aam aadmi-party-communalism- democracy

ಆಮ್ ಆದ್ಮಿ ಪಕ್ಷ ಕೋಮುವಾದ ಹಾಗೂ ಫ್ಯಾಸಿಸ್ಟ್       ವಿರೋಧಿಯೇ? ಪ್ರಜಾಪ್ರಭುತ್ವಪರವೇ? ದೆಹಲಿ ವಿದಾನ ಸಭೆ ಚುನಾವಣೆಗೆ ಮುಗಿದು ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭಾರಿ ಬಹುಮತ ಸಾಧಿಸಿ ಅಧಿಕಾರದ ಚುಕ್ಕಾಣಿಯನ್ನು ಮತ್ತೊಮ್ಮೆ ಹಿಡಿದಿದೆ. ಮೋದಿ ಹಾಗೂ ಅಮಿತ್ ಷಾ ಬಳಗ ಭಾರಿ ದುಷ್ಪ್ರಚಾರಗಳನ್ನು ನಡೆಸಿ ಜನರನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸಿದ್ದರೂ ಸ್ಥಾನಗಳನ್ನು ಗಳಿಸುವಲ್ಲಿ   ಯಶಸ್ಸು ಕಾಣಲಿಲ್ಲ. ಕೇವಲ ಎಂಟು ಸ್ಥಾನಗಳಿಗೆ ಸೀಮಿತವಾಗಬೇಕಾಯಿತು. ಲೋಕಸಭೆಯಲ್ಲಿ ಪ್ರಧಾನ ವಿರೋಧ ಪಕ್ಷವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ 63 ಕಡೆಗಳಲ್ಲಿ ಠೇವಣಿಯನ್ನೇ ಕಳೆದುಕೊಳ್ಳಬೇಕಾಯಿತು. ದೆಹಲಿಯ ಒಟ್ಟು 70 ಸ್ಥಾನಗಳಲ್ಲಿ 66 ವಿದಾನ ಸಭಾ ಸ್ಥಾನಗಳಿಗೆ ಅದು ಸ್ಪರ್ದಿಸಿತ್ತು. ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಷಾ,   ಹತ್ತಕ್ಕೂ ಹೆಚ್ಚಿನ ಮುಖ್ಯ ಮಂತ್ರಿಗಳು, 300 ರಷ್ಟು ಸಂಸದರು, ಭಾರಿ ಪ್ರಮಾಣದ ಸಂಘಪರಿವಾರದ ಕಾರ್ಯ ಕರ್ತರುಗಳನ್ನು ಈ ಚುನಾವಣಾ ಪ್ರಚಾರಕ್ಕೆ ಬಳಸಲಾಗಿತ್ತು. ಹುಸಿ ರಾಷ್ಟ್ರೀಯತೆ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭಯೋತ್ಪಾದನೆ, ಹಿಂದೂ ರಾಷ್ಟ್ರ ,ಸುಳ್ಳು ಮಾಹಿತಿಗಳು ಇತ್ಯಾದಿಗಳ ಮೂಲಕ ಭಾವ ಪ್ರಕೋಪಗಳಿಗೆ ಜನರನ್ನು ಈಡು ಮಾಡಬಹುದಾದ ಪದಗಳನ್ನು ಯತೇಚ್ಛವಾಗಿಯೇ ಬಳಸಲಾಗಿತ್ತು. ತನ್ನ ಹಿಡಿತದಲ್ಲಿರುವ ಆಡಳಿತ ಯಂತ್ರಾಂಗಗಳನ್ನು ಹಾಗೇನೆ ಹಣವನ...

ಪೌರತ್ವ ಕಾಯಿದೆ ವಿರೋಧಿ#ಕಾರ್ಮಿಕರು ಜನಸಾಮಾನ್ಯರ# citizenship, workers# integration

ಪೌರತ್ವ ಕಾಯಿದೆ ವಿರೋಧಿ ಹೋರಾಟದ ವ್ಯಾಪ್ತಿ ಹೆಚ್ಚಾಗಲಿ ! ಕಾರ್ಮಿಕರು ಜನಸಾಮಾನ್ಯರ ಹೋರಾಟದೊಂದಿಗೆ ನಿಲ್ಲಲಿ ! ಸಿ ಎ ಎ, ಎನ್ ಪಿ ಆರ್, ಎನ್ ಆರ್ ಐ ಸಿ ಯಂತಹ ಪೌರತ್ವ ಸಂಬಂಧಿ ಕಾಯಿದೆಗಳ ಹೇರಿಕೆಯನ್ನು ವಿರೋಧಿಸಿ ತಿಂಗಳುಗಳಿಂದ ದೇಶದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಜನಸಾಮಾನ್ಯರು ಬೀದಿಗಿಳಿದಿದ್ದಾರೆ.    ಅದರಲ್ಲೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಇಂದು ಬೀದಿಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಫ್ರಭುತ್ವದ ಪಡೆಗಳು ಹತ್ತಾರು ಜನರನ್ನು ಗುಂಡಿಟ್ಟು ಕೊಂದಿವೆ. ಅದರಲ್ಲೂ ಬಿಜೆಪಿಯ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶ ಹಾಗೂ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರವಿರುವ ಅಸ್ಸಾಂ ನಲ್ಲಿ ಸಾವು ನೋವುಗಳು ಅತ್ಯಧಿಕವಾಗಿ ದಾಖಲಾಗುತ್ತಿವೆ. ಪ್ರಭುತ್ವ ಬೆಂಬಲಿತ ಫ್ಯಾಸಿಸ್ಟ್ ಗೂಂಡಾ ಪಡೆಗಳು ಜೆ ಎನ್ ಯು, ಎ ಎಮ್ ಯು, ಬಿ ಹೆಚ್ ಯು, ದೆಹಲಿ, ಜಾದವ್ ಪುರ, ಪಂಜಾಬ್ ಮೊದಲಾದ ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳ ಮೇಲೆ ದಾಳಿಗಳನ್ನು ನಡೆಸಿ ಹತ್ತಾರು ಜನರನ್ನು ಗಂಭೀರ ರೀತಿಯಲ್ಲಿ ಗಾಯಗೊಳಿಸಿವೆ. ಕರ್ನಾಟಕದ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಹೋರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ   ಹಾಗೂ ಬೀದರಿನ ಶಾಲೆಯಲ್ಲಿ ಸಿ ಎ ಎ ಕುರಿತು ನಾಟಕ ಆಡಿದ ಪುಟ್ಟ ಮಕ್ಕಳು ಮತ್ತವರ ಪೋಷಕರು, ಹಾಗೂ ಶಿಕ್ಷಕರ ಮೇಲೆ ದೇಶದ್ರೋಹದಂತಹ ವಸಾಹತುಶಾಹಿ ಕರಾಳ ಕಾಯ್ದೆಯಡಿ ದೂರು ...

ಆಯವ್ಯಯ 2020.. ಜನಸಾಮಾನ್ಯರನ್ನು# budget of India - 2020

ಆಯವ್ಯಯ 2020.. ಜನಸಾಮಾನ್ಯರನ್ನು ಮತ್ತಷ್ಟು ಅತಂತ್ರಗಳಿಗೆ ದೂಡುವ ಕಸರತ್ತು 2020 ರ ಆಯವ್ಯಯ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮೂಲಕ ಮಂಡಿತವಾಗಿದೆ. ಅದಕ್ಕೂ ಒಂದೆರಡು ದಿನಗಳ ಮೊದಲು   ಕೇಂದ್ರ ಸರಕಾರ ಇಂಡಿಯಾ ಆರ್ಥಿಕ ಸಮೀಕ್ಷೆಯೊಂದನ್ನು ಪ್ರಕಟಿಸಿತ್ತು. ಎರಡು ಭಾಗಗಳನ್ನು ಒಳಗೊಂಡಿರುವ ಈ ಆರ್ಥಿಕ   ಸಮೀಕ್ಷೆಯಲ್ಲಿ ಪುರಾತನ ಇಂಡಿಯಾದ ಆರ್ಥಿಕತೆಯ ಬಗ್ಗೆ ಸಂಶೋಧಿತ ವಿಚಾರದ ಹೆಸರಲ್ಲಿ   ಹಲವಾರು ಅತಿರಂಜಿತವಾಗಿರುವ, ಹುಸಿ   ಪ್ರತಿಷ್ಠೆಯನ್ನು ಪ್ರಾಯೋಜಿಸುವ   ವಿಚಾರಗಳನ್ನು ಹೇಳಲಾಗಿದೆ. ಪುರಾತನ ಇಂಡಿಯಾ ( ಇಂಡಿಯಾ ಎಂಬ ದೇಶ ಆಗ   ಇರಲಿಲ್ಲ ಎನ್ನುವುದನ್ನು ಮರೆಮಾಚಿ ) ಇಡೀ ಜಗತ್ತಿಗೇ ಮಾದರಿಯಾಗಿ ಅಗ್ರಗಣ್ಯ ಸ್ಥಾನದಲ್ಲಿತ್ತು   ಎಂದೆಲ್ಲಾ ಬಣ್ಣಿಸುತ್ತದೆ. ಆ ಸಮೀಕ್ಷೆಯ ಉದ್ದೇಶ ದಿವಾಳಿಯತ್ತ ಸಾಗುತ್ತಿರುವ ದೇಶದ ಆರ್ಥಿಕ ಸ್ಥಿತಿಯನ್ನು ಮರೆಮಾಚಿ ಸರಕಾರಕ್ಕೆ ಪೂರಕವಾಗಿ ಆಯವ್ಯಯಕ್ಕೆ ಪೂರ್ವಭಾವಿಯಾಗಿ ಜನಾಭಿಪ್ರಾಯ ರೂಪಿಸುವುದಾಗಿತ್ತು. ಆದರೆ ಏನೆಲ್ಲಾ ತಿಣಕಾಡಿದರೂ ಒಟ್ಟು ರಾಷ್ಟ್ರೀಯ ಉತ್ಪನ್ನದ ಬೆಳವಣಿಗೆ ಶೇ 6 ರಿಂದ 6.5ಕ್ಕೆ ಸೀಮಿತವಾಗೇ ನೋಡಬೇಕಾಗಿ ಬಂದಿದೆ. ದೇಶದ ಪ್ರಸ್ತುತ ಹೇಳಲಾಗುತ್ತಿರುವ 2.9ಟ್ರಿಲಿಯನ್ ಆರ್ಥಿಕತೆಯನ್ನು ಮುಂದಿನ ದಿನಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯುವ ಮಹದಾಂಕ್ಷೆಯ ಬಗ್ಗೆ ಬಹುರಂಜಿತವಾಗ...