ಇಂದು ಜಮ್ಮು ಮತ್ತು ಕಾಶ್ಮೀರ ! ನಾಳೆ..?! ಇದೇ ಆಗಸ್ಟ್ 5ರಂದು ಮೋದಿಯ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಾಪೇಕ್ಷವಾಗಿ ಕೆಲವು ಸ್ವಾಯತ್ತ ಸ್ಥಾನಮಾನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು. ಸಮರ್ಪಕ ಚರ್ಚೆಗೂ ಅವಕಾಶ ನೀಡದೇ ತರಾತುರಿಯಲ್ಲಿ ಸಂವಿಧಾನದ 370ನೇ ವಿಧಿ ಹಾಗೂ 35 ಎ ಯನ್ನು ರಾಷ್ಟ್ರಪತಿಗಳ ಆಜ್ಞೆಯ ಮೂಲಕ ರದ್ದುಗೊಳಿಸಿದ್ದಲ್ಲದೇ ಒಂದು ರಾಜ್ಯವಾಗಿ ಅದರ ಸ್ಥಾನಮಾನವೂ ಇಲ್ಲದಂತೆ ಮಾಡಿ ಒಡೆದಿರುವುದು ದೇಶವ್ಯಾಪಿ ಬಹು ಮುಖ್ಯ ಚರ್ಚೆಗಳಿಗೆ ಗ್ರಾಸವಾಗಿದೆ. ಮಾತ್ರವಲ್ಲದೇ ಅಂತರಾಷ್ಟ್ರೀಯವಾಗಿಯೂ ಒಂದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಒಡೆಯಲಾಗಿದೆ. ಬ್ರಿಟೀಷ್ ನಂತರದ ಭಾರತದ ಚರಿತ್ರೆಯಲ್ಲಿ ಒಂದು ರಾಜ್ಯದ ಅಸ್ತಿತ್ವವನ್ನೇ ಇಲ್ಲದಂತೆ ಮಾಡಿರುವುದು ಇದೇ ಮೊದಲು. ಇದಕ್ಕೆ ಅಂಬೇಡ್ಕರ್ ಹೆಸರನ್ನೂ ಕೂಡ ಗುರಾಣಿಯನ್ನಾಗಿ ಬಳಸುವ ಪ್ರಯತ್ನ ನಡೆದಿದೆ. ಜಮ್ಮು ಕಾಶ್ಮೀರ ವಿಧಾನಸಭೆ ಇರುವ, ಲಡಾಕ್ ವಿಧಾನ ಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಲೋಕಸಭೆಯ ಎರಡೂ ಸದನಗಳಲ್ಲಿ ಸರ್ಕಾರ ಮಂಡಿಸಿದ್ದ ಜಮ್ಮು ಕಾಶ್ಮೀರ ಪುನರ್ ಸಂಘಟನಾ ಮಸೂದೆ 2019 ಅನ್ನು ಅಂಗೀಕಾರವನ್ನೂ ಪಡೆದುಕೊಂಡಿತು. ಬಿಜೆಪಿ ಪಿಡಿಪಿಯೊಂದಿಗೆ ಸಮ್ಮಿಶ್ರ ಸರಕಾರವನ್ನು ರಚಿಸಿ ನಂತರ ಉ...